ವ್ಯವಹಾರದಲ್ಲಿ ನಷ್ಟ: ಯುವ ಉದ್ಯಮಿ ಆತ್ಮಹತ್ಯೆ
Update: 2019-12-12 16:42 GMT
ಉಡುಪಿ, ಡಿ.12: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಯುವ ಉದ್ಯಮಿಯೊಬ್ಬರು ನೇಣಿಗಿ ಶರಣಾಗಿರುವ ಘಟನೆ ಉಡುಪಿ ಸಮೀಪದ ಬೀಡಿನಗುಡ್ಡೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಬೀಡಿನಗುಡ್ಡೆಯ ಹಂಸರಾಜ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೈಂಟ್ ಫ್ಯಾಕ್ಟರಿಯ ಪಾಲುದಾರರಾಗಿದ್ದು, ಇದರಲ್ಲಿ ಉಂಟಾದ ಆರ್ಥಿಕ ನಷ್ಟದಿಂದ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.