ಸಾಲಿಹಾತ್ ಕಾಲೇಜಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ
ಉಡುಪಿ, ಡಿ.13: ತೋನ್ಸೆ ಹೂಡೆಯ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗಾಗಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ತೋನ್ಸೆ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಇರ್ಷಾದ್ ಮಾತನಾಡಿ, ಮಹಿಳೆಯರು ಆರೋಗ್ಯವಂತರಾದರೆ ಇಡೀ ಕುಟುಂಬ ಸುಗಮವಾಗಿ ಸಾಗುತ್ತದೆ. ಅವರುಗಳು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಪ್ರಸಕ್ತ ದಿನಗಳಲ್ಲಿ ಆರೋಗ್ಯ ಮುಖ್ಯವಾಗುತ್ತದೆ ಎಂದು ಹೇಳಿದರು.
ತೋನ್ಸೆ ವೆಲ್‌ಫೇರ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮುಜಕೀರ್ ಹೂಡೆ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಇಮ್ತಿಯಾಝ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಕಾಲೇಜಿನ ಪ್ರಾಂಶುಪಾಲ ಡಾ.ಸಬೀನಾ, ಮುಖ್ಯ ಶಿಕ್ಷಕಿ ಸುನಂದಾಮೊದಲಾದವರು ಉಪಸ್ಥಿತರಿದ್ದರು.
ಹೂಡೆಯ ಯುನಿಟಿ ಪಾಲಿಕ್ಲಿನಿಕ್‌ನ ವೈದ್ಯರುಗಳಾದ ಡಾ.ರಂಜಿತಾ, ಡಾ. ಅಮೀನಾ, ಡಾ.ಸಬೀಹಾ ವೈದ್ಯಕೀಯ ತಪಾಸಣೆಯ ನೇತೃತ್ವ ವಹಿಸಿಕೊಂಡು, ಹೆಣ್ಣು ಮಕ್ಕಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ವಿದ್ಯಾರ್ಥಿನಿಯರಾದ ಸಬೀಲ ಕೌಸರ್ ಸ್ವಾಗತಿಸಿ, ಶಾಝೀನ್ ಕಾರ್ಯಕ್ರಮ ನಿರೂಪಿಸಿದರು. ನೀಮಾ ಕೌಸರ್ ವಂದಿಸಿದರು.