ಉಡುಪಿ: ಆರ್ಥಿಕ ಹಿಂಜರಿತದ ವಿರುದ್ಧ ಮಾಸ್ ಇಂಡಿಯಾ ಧರಣಿ

Update: 2019-12-14 15:06 GMT

ಉಡುಪಿ, ಡಿ.14: ದೇಶದ ಆರ್ಥಿಕ ಪರಿಸ್ಥಿತಿ ಕುಸಿಯಲು ಕಾರಣವಾದ ಕೇಂದ್ರ ಸರಕಾರ ನೀತಿಗಳ ವಿರುದ್ಧ ಮಾಸ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟ್ಯಾರ್, ಇಂದು ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗು ತ್ತಿದ್ದು, ಸಾಕಷ್ಟು ಉದ್ಯಮಗಳು ಮುಚ್ಚುತ್ತಿವೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಕೃಷಿ ಉದ್ಯಮ ನಷ್ಟದಲ್ಲಿದೆ. ಅಲ್ಲದೆ ದೇಶದಲ್ಲಿ ಭ್ರಷ್ಟಾಚಾರ ತಾಂಡ ವಾಡುತ್ತಿದೆ. ನೋಟು ರದ್ಧತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕೆಳಮಟ್ಟಕ್ಕೆ ಇಳಿದಿದೆ ಎಂದು ಆರೋಪಿಸಿದರು.

ಆದುದರಿಂದ ಕೇಂದ್ರ ಸರಕಾರ ದೇಶದಲ್ಲಿ ಉದ್ಯೋಗ ಸೃಷ್ಠಿ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಅಗತ್ಯವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಆರ್ಥಿಕ ಪರಿಸ್ಥಿತಿ ಸುಧಾರಣೆ ತರುವ ನಿಟ್ಟಿನಲ್ಲಿ ದೇಶದ ಸಂಸದರು ಹಾಗೂ ಶಾಸಕರ ವೇತನ ಮತ್ತು ಪಿಂಚಣಿಯನ್ನು ಕನಿಷ್ಠ ಮೂರು ವರ್ಷಗಳ ಅವಧಿಗೆ ಸ್ಥಗಿತಗೊಳಿಸಬೇಕು. ಆ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮಾಸ್ ಇಂಡಿಯಾ ಮಹಿಳಾ ಘಟಕದ ಸದಸ್ಯೆ ವೀಣಾ ದೀಪಕ್ ಮಾತನಾಡಿದರು. ಧರಣಿಯಲ್ಲಿ ಮಾಸ್ ಇಂಡಿಯಾ ಲಕ್ಷ್ಮೀನಗರ ಅಧ್ಯಕ್ಷ ಜಯ ಪೂಜಾರಿ, ಶಿರ್ವ ಅಧ್ಯಕ್ಷ ಡೋಲ್ಫಿ ಕ್ಯಾಸ್ತಲಿನೋ, ಸದಸ್ಯ ವಿಠಲ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News