ಉಡುಪಿ: ಲೋಕಾಯುಕ್ತದಿಂದ ದೂರು ಸ್ವೀಕಾರ

Update: 2019-12-17 15:26 GMT

ಉಡುಪಿ, ಡಿ.17:ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.

ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆ ಗಳನ್ನು ಸ್ಥಳದಲ್ಲೇ ಬಗೆಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳನ್ನು ಡಿ.21 ರಂದು ಬೆಳಗ್ಗೆ 11ರಿಂದ 12:30ರವರೆಗೆ ಕಾರ್ಕಳ ಪ್ರವಾಸಿ ಮಂದಿರ, ಡಿ.23 ರಂದು ಬೆಳಗ್ಗೆ 11ರಿಂದ 12:30ರವರೆಗೆ ಕುಂದಾಪುರ ಪ್ರವಾಸಿ ಮಂದಿರ ಹಾಗೂ ಡಿ.24ರಂದು ಬೆಳಗ್ಗೆ 11ರಿಂದ 12:30ರವರೆಗೆ ಬೈಂದೂರು ಪ್ರವಾಸಿ ಮಂದಿರ ದಲ್ಲಿ ದೂರು ಸ್ವೀಕರಿಸಲಾಗುವುದು.

ಉಡುಪಿ ತಾಲೂಕಿಗೆ ಸಂಬಂದಪಟ್ಟಂತೆ ದೂರು ಅರ್ಜಿಗಳನ್ನು ನೀಡುವವರು ನೇರವಾಗಿ ಕರ್ನಾಟಕ ಲೋಕಾಯುಕ್ತ ಉಡುಪಿ ಕಚೇರಿಯನ್ನು ಸಂಪರ್ಕಿಸ ಬಹುದು. ಸಾರ್ವಜನಿಕರಿಗೆ ತಮ್ಮ ಸರಕಾರಿ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆಗಳಾದಲ್ಲಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ, ದೂರವಾಣಿ ಸಂಖ್ಯೆ 0820-2527770, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ದೂರವಾಣಿ ಸಂಖ್ಯೆ: 0820-2536661 ಸಂಪರ್ಕಿಸಬಹುದು ಎಂದು ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ ಇವರ ಪ್ರಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News