ಕನ್ಯಾನ: ಟೆಂಪೊ ಚಾಲಕನ ಕಡಿದು ಕೊಲೆ

Update: 2019-12-17 16:58 GMT
ಬಾಬು ಶೆಟ್ಟಿ

ಕುಂದಾಪುರ, ಡಿ.17: ಟೆಂಪೊ ಚಾಲಕರೊಬ್ಬರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕನ್ಯಾನ ಗ್ರಾಮದ ಕಲ್ಲು ಕಂಬದಿಂದ ದೇವಲ್ಕುಂದಕ್ಕೆ ಹೋಗುವ ರಸ್ತೆಯ ಗೇರು ಹಾಡಿಯಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ಕಾವ್ರಾಡಿ ಗ್ರಾಮದ ವಾಲ್ತೂರು ಜೋರಮಕ್ಕಿ ನಿವಾಸಿ ಬಾಬು ಶೆಟ್ಟಿ (55) ಎಂದು ಗುರುತಿಸಲಾಗಿದೆ. ಟೆಂಪೋ ಮಾಲಕ ಹಾಗೂ ಚಾಲಕರಾಗಿ ರುವ ಇವರು ತನ್ನ ಟೆಂಪೊದಲ್ಲಿ ಗೊಬ್ಬರ ಸಾಗಿಸುವ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಬೈಕಿನಲ್ಲಿ ಹೊರಟ ಬಾಬು ಶೆಟ್ಟಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕೊಲೆಯಾಗಿ ಪತ್ತೆಯಾಗಿದ್ದಾರೆ.

ದುಷ್ಕರ್ಮಿಗಳು ಬಾಬು ಶೆಟ್ಟಿಯ ತಲೆಯ ಹಿಂಬದಿ ಹಾಗೂ ಎದೆಗೆ ಆಯುಧ ದಿಂದ ಹೊಡೆದು ಸಾಯಿಸಿರುವುದು ಕಂಡುಬಂದಿದೆ. ಮೃತರ ದ್ವಿಚಕ್ರ ವಾಹನವು ಸುಮಾರು 100 ಮೀಟರ್ ದೂರದ ರಸ್ತೆಯಲ್ಲಿ ಬಿದ್ದುಕೊಂಡಿರುವುದು ಪತ್ತೆಯಾಗಿದೆ.

ದ್ವಿಚಕ್ರ ವಾಹನದ ಮೇಲೆ ರಕ್ತದ ಕಲೆ, ಹೆಲ್ಮೆಟ್ ಹಾಗೂ ಪಕ್ಕದಲ್ಲಿ ಚಪ್ಪಲಿ ಬಿದ್ದುಕೊಂಡಿದೆ. ಮೃತರ ಕಿರಿಯ ಸಹೋದರ ಪ್ರಕಾಶ್ ಶೆಟ್ಟಿ ನೀಡಿದ ದೂರಿ ನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸ ಲಾಗಿದ್ದು, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ಮಂಜಪ್ಪ ತನಿಖೆ ನಡೆಸುತ್ತಿದ್ದಾರೆ.

ಜಾಗದ ತಕರಾರು ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರಂತೆ ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ವಿಶೇಷ ತಂಡ ರಚನೆ

ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿ, ಕುಂದಾಪುರ ವೃತ್ತ ನಿರೀಕ್ಷಕರು ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ತಂಡ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ತನಿಖೆ ನಡೆಸಿದೆ. ಆರೋಪಿ ಗಳನ್ನು ಶೀಘ್ರ ಪತ್ತೆ ಹಚ್ಚಲು ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕ ಸಿ.ಕಿರಣ್ ನೇತೃತ್ವದ ತಂಡವನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News