21ಕ್ಕೆ ಮಲ್ಪೆಯಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

Update: 2019-12-17 17:03 GMT

 ಉಡುಪಿ, ಡಿ.17: ಮಲ್ಪೆಯ ಹಾರ್ಡ್‌ಕೋರ್ ಹೆಲ್ತ್ ಎಂಡ್ ಫಿಟ್ನೆಸ್ ಜಿಮ್‌ನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಬಾಡಿಬಿಲ್ಡರ್ಸ್‌ ಅಸೋಸಿಯೇಶನ್ ಹಾಗೂ ಕರ್ನಾಟಕ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್‌ನ ಸಹಯೋಗ ದೊಂದಿಗೆ ಕರ್ನಾಟಕ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿ. ಹಾರ್ಡ್‌ಕೋರ್ ಕ್ಲಾಸಿಕ್-2019’ ಡಿ.21ರ ಶನಿವಾರ ಸಂಜೆ 5:00 ಗಂಟೆಗೆ ಮಲ್ಪೆ-ವಡಬಾಂಡೇಶ್ವರ ಗಾಂಧಿ ಶತಾಬ್ದಿ ಹಿರಿಯ ಪ್ರಾಥಮಿ ಶಾಲಾ ಮೈದಾನ ದಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ 150ಕ್ಕೂ ಅಧಿಕ ಪ್ರತಿಭಾನ್ವಿತ ದೇಹದಾರ್ಢ್ಯ ಪಟುಗಳು ಈ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ದೇಹತೂಕದ ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಿಗಳ ದೇಹ ತೂಕದ ಪರಿಶೀಲನೆ ಅಪರಾಹ್ನ 12:00ರಿಂದ 2:00ರವರೆಗೆ ನಡೆಯಲಿದೆ ಎಂದು ಸ್ಪರ್ಧೆಯ ಸಂಘಟಕ ಹಾರ್ಡ್‌ಕೋರ್ ಹೆಲ್ತ್ ಎಂಡ್ ಫಿಟ್ನೆಸ್ ಜಿಮ್‌ನ ಸ್ಥಾಪಕ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಕಾಂಚನ್ ಮಲ್ಪೆ ಹಾಗೂ ಸಂಘಟನಾ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News