ಡಿ. 28ರಂದು ಎನ್‌ಆರ್‌ಸಿ-ಸಿಎಎ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ

Update: 2019-12-18 11:29 GMT

ಮುಸ್ಲಿಂ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ನಿರ್ಧಾರ

ಮಂಗಳೂರು, ಡಿ.18: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೊಳಿಸಲು ಮುಂದಾಗಿರುವ ಎನ್‌ಆರ್‌ಸಿ-ಸಿಎಎ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಡಿ. 28ರಂದು ಅಪರಾಹ್ನ 3 ಗಂಟೆಗೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರತಿಭಟನೆಯ ಯಶಸ್ವಿಗಾಗಿ ಕೋರ್ ಕಮಿಟಿಯೊಂದನ್ನು ರಚಿಸಲು ಕೂಡಾ ಸಭೆ ನಿರ್ಧರಿಸಿದೆ.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ. ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್, ಪ್ರಮುಖರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹನೀಫ್ ಹಾಜಿ ಬಂದರ್, ಮಾಜಿ ಮೇಯರ್ ಕೆ. ಅಶ್ರಫ್, ಕೆ.ಎಂ. ಶರೀಫ್, ರಫೀಉದ್ದೀನ್ ಕುದ್ರೋಳಿ, ಸಿ.ಎಚ್. ಮಹ್ಮೂದ್ ಹಾಜಿ, ಬಾಷಾ ಸಾಹೇಬ್ ಕುಂದಾಪುರ, ಅಹ್ಮದ್ ಬಾವಾ, ಅಲಿ ಹಸನ್, ಡಿಎಂ ಅಸ್ಲಂ, ಟಿಎಸ್. ಅಬ್ದುಲ್ಲಾ, ಮುಸ್ತಫಾ ಕೆಂಪಿ, ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್ ಕೊಡಾಜೆ, ಜಲೀಲ್ ಕೃಷ್ಣಾಪುರ, ತಬೂಕ್ ದಾರಿಮಿ, ಸಿದ್ದೀಕ್ ತಲಪಾಡಿ, ಶರೀಫ್ ಕೂಳೂರು, ಇಕ್ಬಾಲ್ ಮುಲ್ಕಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News