ಜೆಎಸ್ ಡಬ್ಲ್ಯೂಎಕ್ಸ್ ಪ್ಲೋರ್- ಮಾರಾಟಗಾರರ ವಾರ್ಷಿಕ ಸಮಾವೇಶ 2019

Update: 2019-12-19 14:44 GMT

ಮಂಗಳೂರು,ಡಿ.18: ನಗರದ ಹೊಟೇಲ್ ಒಶಿಯನ್ ಪರ್ಲ್ ಸಭಾಂಗಣದಲ್ಲಿಂದು ಜೆಎಸ್ ಡಬ್ಲ್ಯೂ ಕಲರಾನ್ ಪ್ಲಸ್ ಎಕ್ಸ್ ಪ್ಲೋರ್ ನ ಮೇಲ್ಛಾವಣಿಯ ಸ್ಟೀಲ್  ಕಲರ್ ಶೀಟ್ ಮತ್ತು ಜೆಎಸ್ ಡಬ್ಲ್ಯೂನ ಇತರುತ್ಪನ್ನಗಳ ಮಾರಾಟಗಾರರ ವಾರ್ಷಿಕ ಸಮಾವೇಶ ನಡೆಯಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜೆಎಸ್ ಡಬ್ಲ್ಯೂ ದಕ್ಷಿಣ ವಲಯದ ವ್ಯವಸ್ಥಾಪಕರಾದ ತ್ಯಾಗರಾಜನ್ ಗಣೇಶ್, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ ಹಾಲಿ ಉಕ್ಕಿನ ಬಳಕೆ ಕಡಿಮೆ. ಮುಂದಿನ ದಿನಗಳಲ್ಲಿ ಭಾರತದ ನಿರ್ಮಾಣ ಕ್ಷೇತ್ರದಲ್ಲಿ ಉಕ್ಕಿನ ಬೇಡಿಕೆ ಹೆಚ್ಚುತ್ತಿರುವುದರಿಂದ ಭವಿಷ್ಯದ ಲ್ಲಿ ಉಕ್ಕಿನ ಶೀಟ್ ಸೇರಿದಂತೆ ನಿರ್ಮಾಣ ಕ್ಷೇತ್ರದ ಸಾಮಾಗ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜೆಎಸ್ ಡಬ್ಲ್ಯೂ ಉಕ್ಕಿನ ಶೀಟ್ ಜೊತೆಗೆ ನಿರ್ಮಾಣ ಕ್ಷೇತ್ರದ ಸಾಮಾಗ್ರಿಗಳು, ಸಿಮೆಂಟ್, ಸ್ಟೀಲ್ ಡೋರ್ ಗಳು ಸೇರಿದಂತೆ ಸಾಕಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದರು.

ಜೆಎಸ್ ಡಬ್ಲ್ಯೂ ಕಲರಾನ್ ಪ್ಲಸ್ ಶೀಟ್ ಹಲವು ವರ್ಣಗಳ ಉಕ್ಕಿನ ಶೀಟ್ ಅಲುಮಿನಿಯಂಜಿಂಕ್ ಆವರಣದ ಉತ್ತಮ ಗುಣಮಟ್ಟದ ಶೀಟ್ ಗಳು ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಭಾರತದಲ್ಲಿ 6 ಪ್ಲ್ಯಾಂಟ್  ಸೇರಿದಂತೆ ಒಂಭತ್ತು ಪ್ಲಾಂಟ್ ಗಳನ್ನು ಹೊಂದಿದೆ. ಭಾರತದಿಂದ 120 ದೇಶಗಳಿಗೆ ಜೆಎಸ್ ಡಬ್ಲ್ಯೂ ಉತ್ಪನ್ನಗಳು ಮಾರಾಟವಾಗುತ್ತಿವೆ. 14 ವರ್ಷದಲ್ಲಿ 18 ಮಿಲಿಯ ಮೆಟ್ರಿಕ್ ಟನ್ ಉಕ್ಕಿನ ಉತ್ಪನ್ನಗಳ ವ್ಯವಹಾರ ನಡೆಸುವ ದೇಶದ ಪ್ರಮುಖ ಸಂಸ್ಥೆ ಜೆಎಸ್ ಡಬ್ಲ್ಯೂ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಜೆಎಸ್ ಡಬ್ಲ್ಯೂ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೀವತ್ಸ ತಿಳಿಸಿದ್ದಾರೆ.

ಸಮಾರಂಭದಲ್ಲಿ ಜೆಎಸ್ ಡಬ್ಲ್ಯೂ ಅಧಿಕಾರಿಗಳಾದ ರಾಜೇಶ್ ಜಲೇಲಾ, ಸತೀಶ್ ಮೋರೆ ಮೊದಲಾದವರು ಉಪಸ್ಥಿತರಿದ್ದರು.

ಜೆಎಸ್ ಡಬ್ಲ್ಯೂ ಉತ್ಪನ್ನ ಗಳ ಪ್ರಧಾನ ವಿತರಕರು ಮತ್ತು ಮಾರಾಟಗಾರರಾದ ಡೆಲ್ಟಾ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕರಾದ ಮುಹಮ್ಮದ್ ಶರೋಝ್ ಸ್ವಾಗತಿಸಿದರು.

ಡೆಲ್ಟಾ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಉತ್ತಮ ನಿರ್ವಹಣೆ ನೀಡಿದ ಮ್ಯಾನೇಜರ್ ರಿಫಾಝ್ ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News