ಭಾಸ್ಕರಾನಂದ ಕುಮಾರ್‌ಗೆ ಕದ್ರಿ ಯಕ್ಷ ಸಮ್ಮಾನ್ ಪ್ರಶಸ್ತಿ
Update: 2019-12-18 18:02 GMT
ಮಂಗಳೂರು, ಡಿ.18: ಕದ್ರಿ ಬಾಲ ಯಕ್ಷಕೂಟದ ಕದ್ರಿ ಯಕ್ಷ ಸಮ್ಮಾನ ಪ್ರಶಸ್ತಿಗೆ ಹಿರಿಯ ಕಲಾವಿದ, ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆಯಾಗಿದ್ದಾರೆ.
ಡಿ.22ರಂದು ಕದ್ರಿ ರಾಜಾಂಗಣದಲ್ಲಿ ನಡೆಯುವ ಕದ್ರಿ ಬಾಲ ಯಕ್ಷಕೂಟ ಏಕಾದಶ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.