ಡಿ. 24ರಂದು ಬಿ.ಸಿ.ರೋಡ್ ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನಾ ರ್ಯಾಲಿ

Update: 2019-12-19 15:11 GMT

ಬಂಟ್ವಾಳ, ಡಿ. 19: ಪೌರತ್ವ ಕಾಯ್ದೆ ವಿರೋಧ ವ್ಯಕ್ತಪಡಿಸಿ ಡಿ. 24ರಂದು ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್ ಆರ್ ಸಿ ಪೌರತ್ವ ಕಾಯ್ದೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಮುಹಮ್ಮದ್ ಶಫಿ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 2:30ಗಂಟೆಗೆ ಶಾಂತಿಯುತ ಶಿಸ್ತುಬದ್ಧ ಪ್ರತಿಭಟನಾ ರ್ಯಾಲಿ ಕೈಕಂಬದಿಂದ ಹೊರಟು ಬಿ.ಸಿ‌.ರೋಡ್ ನಾರಾಯಣ ಗುರು ವೃತ್ತ ತಲುಪಿ ಅಲ್ಲಿಂದ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸಮಾಪ್ತಿಗೊಳ್ಳಲಿದೆ. ಬಳಿಕ ಸಂಜೆ ಪ್ರತಿಭಟನಾ ಸಭೆ ನಡೆಯಲಿದೆ. ಸರ್ವಪಕ್ಷಗಳ ಮುಸ್ಲಿಮರು, ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳು, ಹಿಂದೂ, ಕ್ರೈಸ್ತ ಹಾಗೂ ದಲಿತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವರು ಎಂದ ಅವರು, ಎನ್ ಆರ್ ಸಿ, ಪೌರತ್ವ ಕಾಯ್ದೆಯು ಸಂವಿಧಾನ ವಿರೋಧಿ ಕಾಯ್ದೆಯಾಗಿದ್ದು, ಕೇವಲ ಮುಸ್ಲಿಂ ಸಮುದಾಯವನ್ನು ಗುರುಪಡಿಸಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಖಂಡನೆ

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ವಾರ್ತಾಭಾರತಿ ವರದಿಗಾರನ ಐಡಿ ಕಿತ್ತು ಪೊಲೀಸರು ಲಾಠಿ ಬೀಸಿರುವುದು ಖಂಡನೀಯ ಎಂದು ಸಲೀಂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಅಬೂಬಕರ್, ಪಿ.ಎ.ರಹೀಂ, ಕೆ.ಎಚ್. ಅಬೂಬಕರ್, ಶಾಹುಲ್ ಹಮೀದ್ ಎಸ್.ಎಚ್., ಸಲೀಂ, ಶಾಹುಲ್ ಹಮೀದ್, ಮುಸ್ತಫಾ, ಹಾರೂನ್ ರಶೀದ್, ಮುನೀಶ್ ಅಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News