ಉಡುಪಿ ವಿಧಾನಸಭಾ ಕ್ಷೇತ್ರ ಸಾಧಕ ಶಾಲೆಗಳಿಗೆ ಪ್ರಶಸ್ತಿ

Update: 2019-12-19 16:40 GMT

ಉಡುಪಿ, ಡಿ.19: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಧಕ ಶಾಲೆಗಳು ಹಾಗೂ ಸಾಧಕ ಶಿಕ್ಷಕರ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು,  ಬ್ರಹ್ಮಾವರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಶಾಲೆ ಮತ್ತು ಶಿಕ್ಷರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಶಾಸಕ ಕೆ.ರಘುಪತಿ ಭಟ್ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ಈ ಪ್ರಶಸ್ತಿಗಳಿಗೆ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯೊಂದು ಅರ್ಹ ಶಾಲೆ ಹಾಗೂ ಶಿಕ್ಷಕರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಗೆ ಉಡುಪಿ ಕ್ಷೇತ್ರದ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಹಾಗೂ ಅಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಉಡುಪಿ ಕ್ಷೇತ್ರದ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಹಾಗೂ ಅಲ್ಲಿನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ಸಂಜೆ 6 ಗಂಟೆಗೆ ಬ್ರಹ್ಮಾವರ ಬಸ್‌ನಿಲ್ದಾಣದ ಬಳಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ನಡೆಯಲಿದೆ.

ಪ್ರಶಸ್ತಿ ವಿಜೇತರ ವಿವರ ಹೀಗಿದೆ

ಸಾಧಕ ಶಾಲೆಗಳು: ಪದವಿ ಪೂರ್ವ ವಿಭಾಗ: 1.ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, 2.ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರ್ಣೆ. ಪ್ರೌಢ ಶಾಲಾ ವಿಭಾಗ (ಸರಕಾರಿ): 1.ಸರಕಾರಿ ಪ್ರೌಢ ಶಾಲೆ ಬ್ರಹ್ಮಾವರ 2.ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರ. ಪ್ರೌಢ ಶಾಲಾ ವಿಭಾಗ(ಅನುದಾನಿತ):1.ಶಾರದಾ ಪ್ರೌಢ ಶಾಲೆ ಚೇರ್ಕಾಡಿ,2.ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ ಬ್ರಹ್ಮಾವರ. ಪ್ರೌಢ ಶಾಲಾ ವಿಭಾಗ (ಅನುದಾನ ರಹಿತ):1.ವೌಂಟ್ ರೋಸರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಲ್ಯಾಣಪುರ, 2.ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮಲ್ಪೆ.

ಸಾಧಕ ಶಿಕ್ಷಕ ಪ್ರಶಸಿ (ಕನ್ನಡ ಮಾಧ್ಯಮ):1.ಶಾಲಿನಿ ಶೆಟ್ಟಿ, ಶಾರದಾ ಪ್ರೌಢ ಶಾಲೆ ಚೇರ್ಕಾಡಿ (ಪ್ರಥಮ ಭಾಷೆ ಕನ್ನಡ), 2.ಅಶೋಕ ಹೆಗ್ಡೆ, ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜು ಉಡುಪಿ (ಪ್ರಥಮ ಭಾಷೆ ಸಂಸ್ಕೃತ), 3. ಆನಂದ ಮೊಗೇರ, ಸರಕಾರಿ ಪ್ರೌಢ ಶಾಲೆ ಮಲ್ಪೆ (ದ್ವಿತೀಯ ಭಾಷೆ ಇಂಗ್ಲೀಷ್) 4.ರಮೇಶ್ ಶೆಟ್ಟಿ, ಶಾರದಾ ಪ್ರೌಢಶಾಲೆ ಚೇರ್ಕಾಡಿ (ತೃತೀಯ ಭಾಷೆ ಹಿಂದಿ), 5.ವಿಷ್ಣುದಾಸ ಉಪಾಧ್ಯಾಯ, ಎಸ್‌ಎಂಎಸ್ ಬ್ರಹ್ಮಾವರ (ಗಣಿತ), 6.ಲಕ್ಷಾದಿನಿ, ಸರಕಾರಿ ಪದವಿ ಪೂರ್ವ ಕಾಲೇಜು ಕರ್ಜೆ (ವಿಜ್ಞಾನ), 7.ಅಶೋಕ ಕುಮಾರ ಶೆಟ್ಟಿ, ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ (ಸಮಾಜ ವಿಜ್ಞಾನ).

ಸಾಧಕ ಶಿಕ್ಷಕ ಪ್ರಶಸ್ತಿ (ಆಂಗ್ಲ ಮಾಧ್ಯಮ): 1.ಉಮಾಕಾಂತ ಗೌಡ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರ (ಪ್ರಥಮ ಭಾಷೆ ಕನ್ನಡ), 2.ಜಯಶ್ರೀ, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೈಲಕೆರೆ ಉಡುಪಿ ( ಪ್ರಥಮ ಭಾಷೆ ಸಂಸ್ಕೃತ), 3.ಸಂಧ್ಯಾ ಪ್ರದೀಪ್ ಕಾರ್ನಾಡ್, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೈಲಕೆರೆ ಉಡುಪಿ (ದ್ವಿತೀಯ ಭಾಷೆ ಇಂಗ್ಲೀಷ್), 4.ಆರತಿ, ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ (ತೃತೀಯ ಭಾಷೆ ಹಿಂದಿ), 5.ಸುಲೋಚನಾ, ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ (ತೃತೀಯ ಭಾಷೆ ಹಿಂದಿ), 6.ಲಕ್ಷ್ಮೀ ತೆಂಕಿಲಾಯ, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೈಲಕೆರೆ (ಗಣಿತ), 7.ರಜನಿ ಉಡುಪ, ಶ್ರೀಅನಂತೇಶ್ವರ ಆಂಗ್ಲ ಮಾದ್ಯಮ ಶಾಲೆ ಬೈಲಕೆರೆ (ಗಣಿತ), 8.ಲವೀನಾ, ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬ್ರಹ್ಮಾವರ (ವಿಜ್ಞಾನ), 9. ಕವಿತಾ, ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬ್ರಹ್ಮಾವರ (ಸಮಾಜ ವಿಜ್ಞಾನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News