ಪೇಜಾವರಶ್ರೀ ಅನಾರೋಗ್ಯ : ಮಣಿಪಾಲ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಭೇಟಿ

Update: 2019-12-21 10:15 GMT

ಉಡುಪಿ: ಪೇಜಾವರಶ್ರೀ ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿದರು. 

ಪೇಜಾವರಶ್ರೀ ಆರೋಗ್ಯ ವಿಚಾರಣೆಗೆ ತೆರಳಿದ ಸಿಎಂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರಶ್ರೀ ಅವರ ವೈದ್ಯರೊಂದಿಗೆ ಮಾತುಕತೆ ನಡೆಸಿದರು. ನಂತರ ಸ್ವಾಮೀಜಿ ಆಪ್ತವಲಯದಿಂದ ಮಾಹಿತಿ ಪಡೆದುಕೊಂಡರು.

ಸಿಎಂ‌ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ‌‌ ಶೋಭಾ ಕರಂದ್ಲಾಜೆ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News