''ಗಲಭೆ ನಡೆದದ್ದು ತನ್ನ ಕ್ಷೇತ್ರದಲ್ಲಲ್ಲ'' ಎಂಬ ಖಾದರ್ ಹೇಳಿಕೆಗೆ ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2019-12-22 07:16 GMT

ಮಂಗಳೂರು, ಡಿ.22: ತನ್ನ ಕ್ಷೇತ್ರದಲ್ಲಿ ಅಲ್ಲ ಗಲಭೆ ನಡೆದಿರುವುದು ಎಂಬ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅವರ ಹೇಳಿಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಗಲಭೆ ಎಲ್ಲಿ ಆಗಿತ್ತು ಎನ್ನುವುದಕ್ಕಿಂತ, ಅದಕ್ಕೆ ಪ್ರಚೋದನೆ ನೀಡಿರುವುದು ಯಾರು ಎನ್ನುವುದು ಮುಖ್ಯವಾಗುತ್ತದೆ ಎಂದು ಕಾಮತ್ ಟ್ವೀಟ್ ಮಾಡಿದ್ದಾರೆ.

‘‘ಯು.ಟಿ.ಖಾದರ್ ಅವರೇ, ಗಲಭೆ ಎಲ್ಲಿ ಆಗಿತ್ತು ಎನ್ನುವುದಕ್ಕಿಂತಲೂ ಪ್ರಚೋದನೆ ನೀಡಿದ್ದು ಯಾರು ಎನ್ನುವುದು ಪ್ರಾಮುಖ್ಯವಾದದ್ದು. ಕ್ಷೇತ್ರ ನನ್ನದೇ ಆದರೂ ನಾನೇನೂ ಬೆಂಕಿ ಹಚ್ಚುವ ಮಾತನಾಡಿ ಜನರನ್ನು ದಾರಿ ತಪ್ಪಿಸುವಂತೆ ಮಾಡಿಲ್ಲ. ನಮಗೆ ಬೇಕಿರುವುದು ಸಾಮರಸ್ಯ ಮಾತ್ರ.ಶಾಂತಿ ಬೇಕಿದ್ದವರು ಬೆಂಕಿ ಹಚ್ಚುವ ಮಾತನಾಡಬಹುದೇ?’’ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡರ ಹೇಳಿಕೆಯೊಂದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸುವ ಸಂದರ್ಭ ಯು.ಟಿ.ಖಾದರ್, ‘‘ನಿಮಗೆ ಜಾಣ ಕುರುಡೋ ಅಥವಾ ಆಯ್ದ ಕುರುಡೋ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಗಲಭೆ ಆಗ್ತಾ ಇದೆ ಅಂತಾ ಹಸಿ ಸುಳ್ಳನ್ನ ಹೇಳಿದ್ದಿರಿ. ಗಲಭೆ ಆಗಿರುವುದು ನಿಮ್ಮದೇ ಶಾಸಕ ವೇದವ್ಯಾಸ ಕಾಮತ್ ಅವರ ಕ್ಷೇತ್ರದಲ್ಲಿ. ನನ್ನ ಕ್ಷೇತ್ರದಲ್ಲಿ ಅಲ್ಲ’’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ವೇದವ್ಯಾಸ್ ಕಾಮತ್ ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News