ಮಂಗಳೂರಿಗೆ ಯುಡಿಎಫ್ ನಿಯೋಗ ಭೇಟಿ

Update: 2019-12-23 15:18 GMT

ಮಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಗುರುವಾರ ನಡೆದ ಹಿಂಸಾಚಾರದ ಸಂದರ್ಭ ಗೋಲಿಬಾರ್‌ಗೆ ಬಲಿಯಾದ ಬಂದರ್ ಕಂದುಕ ನಿವಾಸಿ ಅಬ್ದುಲ್ ಜಲೀಲ್ ಮತ್ತು ಕುದ್ರೋಳಿಯ ನೌಶಿನ್‌ನ ನಿವಾಸಕ್ಕೆ ಕೇರಳದ ಯುಡಿಎಫ್ ನಿಯೋಗ ಸೋಮವಾರ ಭೇಟಿ ನೀಡಿತು.

ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಕಣ್ಣೂರು ಸಂಸದ ಕೆ.ಸುಧಾಕರನ್ ‘ಗುಂಡೇಟಿನಿಂದ ಬಲಿಯಾದವರು, ಗಾಯಗೊಂಡವರು ಅಮಾಯಕರು. ಅವರ್ಯಾರೂ ಹಿಂಸಾಚಾರಕ್ಕೆ ಇರಿದಿರಲಿಲ್ಲ. ಪೊಲೀಸರು ಉದ್ದೇಶಪೂರ್ವಕವಾಗಿ ದುಷ್ಕೃತ್ಯ ನಡೆಸಿದರು. ಇದರಲ್ಲಿ ತಪ್ಪಿತಸ್ಥ ಅಧಿಕಾರಿಗಳು ಯಾರಿದ್ದಾರೋ ಅವರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.

ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಶಾಸಕರಾದ ಪಾರಕ್ಕಲ್ ಅಬ್ದುಲ್ಲ, ಶಂಸುದ್ದೀನ್ ಅವರನ್ನು ಒಳಗೊಂಡ ನಿಯೋಗವು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News