ಹಿಂಸಾಚಾರ ಪ್ರಕರಣ : ನ್ಯಾಯಾಂಗ ತನಿಖೆಗೆ ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹೀಂ ಒತ್ತಾಯ
Update: 2019-12-23 15:24 GMT
ಮಂಗಳೂರು, ಡಿ.23: ಪ್ರತಿಭಟನಾಕಾರರ ಮತ್ತು ಪೊಲೀಸರ ಮಧ್ಯೆ ಗುರುವಾರ ನಡೆದ ಹಿಂಸಾಚಾರ, ಗೋಲಿಬಾರ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ ಆಗ್ರಹಿಸಿದ್ದಾರೆ.
ಗುರುವಾರದಂದು ಆರೇಳು ಸಾವಿರ ಜನರು ಸೇರಿ ಪ್ರತಿಭಟಿಸಿದರು ಎಂದು ಕಮಿಷನರ್ ಹೇಳಿಕೆ ನೀಡಿದರೆ, ಡಿಸಿಪಿ ಅರುಣಾಂಶುಗಿರಿ ನೀಡಿದ ದೂರಿನಲ್ಲಿ 1,500ದಿಂದ 2 ಸಾವಿರ ಮಂದಿ ಗುಂಪು ಸೇರಿದರು ಎಂದು ತಿಳಿಸಿದ್ದಾರೆ. ಹಾಗಾಗಿ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ಸುಳ್ಳು ಹೇಳುತ್ತಿರುವುದಕ್ಕೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಇಬ್ರಾಹೀಂ ತಿಳಿಸಿದ್ದಾರೆ.