ಜನಪದ ಕಲಾವಿದ ಮುಹಮ್ಮದ್ ಮಾರಿಪಳ್ಳ ನಿಧನ

Update: 2019-12-23 16:39 GMT

ಮಂಗಳೂರು, ಡಿ.23: ಜನಪದ ಸಂಗೀತಗಾರ ಮುಹಮ್ಮದ್ ಮಾರಿಪಳ್ಳ (70) ನಗರದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು.

 ಸ್ವರಚಿತ ಕವನಗಳನ್ನು ರಚಿಸಿ ಜನಪದ ಹಿನ್ನೆಲೆಯಲ್ಲಿ ಗಾಯನದ ಮೂಲಕ ಅವರು ಹಲವು ಸಂಗೀತ ಕಾರ್ಯಕ್ರಮ ನಡೆಸಿದ್ದರು. ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರ ವಿಭಾಗದಲ್ಲಿ ಕಳೆದ 20 ವರ್ಷಗಳಿಂದ ಕಲಾವಿದರಾಗಿದ್ದ ಅವರು, ಸರಕಾರದ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕವನ ರಚಿಸಿ ಸಂಗೀತದ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದರು.
ದ.ಕ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮುಹಮ್ಮದ್ ಮಾರಿಪಳ್ಳ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News