ಬೆಳ್ಮಣ್ ನಲ್ಲಿ ಮಹಿಳೆಯ ಕೊಲೆ ಪ್ರಕರಣ : ಆರೋಪಿಗಳಿಬ್ಬರ ಬಂಧನ
Update: 2019-12-23 17:15 GMT
ಕಾರ್ಕಳ: ಬೆಳ್ಮಣ್‍ನಲ್ಲಿ ಚಿನ್ನಾಭರಣ ದರೋಡೆಗೈದು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಲೆಗೈದು ಪ್ಲಾಸ್ಟಿಕ್ ಟರ್ಪಲ್‍ನಲ್ಲಿ ಸುತ್ತಿ ಬಾವಿಗೆ ಎಸೆದ ಪ್ರಕರಣವನ್ನು ಭೇದಿಸಿದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಝೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ಮಣ್‍ನ ರೋನಾಲ್ಡ್, ಶಿರ್ವದ ಸ್ಟೀಫನ್ ಬಂಧಿತ ಆರೋಪಿಗಳು.
ಡಿ. 20ರಂದು ಅವರು ಬೆಳ್ಮಣ್‍ನ ಬೃಂದಾವನ ಮನೆಗೆ ಅಕ್ರಮ ಪ್ರವೇಶಗೈದು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ ಕೊಲೆಗೈದು ಮನೆಯ ಕವಾಟಿನಲ್ಲಿದ್ದ ಚಿನ್ನಾಭರಣಗಳನ್ನು ದರೋಡೆಗೈದು ನಂತರ ತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿದ್ದ ತಾಯಿ ನಾಪತ್ತೆಯಾಗಿರುವ ಕುರಿತು ಅವರ ಪುತ್ರ ಶ್ರೀನಾಥ ಉಡುಪ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.