ಗೋಲಿಬಾರ್: ಉನ್ನತ ಮಟ್ಟದ ತನಿಖೆಗೆ ಆಗ್ರಹ

Update: 2019-12-24 14:45 GMT

ಕಾಪು, ಡಿ.24: ಮಂಗಳೂರಿನಲ್ಲಿ ಗೋಲಿಬಾರ್ ಹೆಸರಿನಲ್ಲಿ ನಡೆದ ಎರಡು ಅಮಾಯಕರ ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸುನ್ನೀ ಮದ್ರಸ ಅಧ್ಯಾಪಕರ ಒಕ್ಕೂಟ ಕಾಪು ರೇಂಜ್ ಒತ್ತಾಯಿಸಿದೆ.

ಅಬ್ದುಲ್ ರಶೀದ್ ಸಖಾಫಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಕಾಪು ಉಸ್ತಾದ್ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ಸಭೆಯನ್ನು ಬಶೀರ್ ಹನೀಫಿ ಉದ್ಘಾಟಿಸಿ ಮಾತನಾಡಿದರು. ನಝೀರ್ ಮದನಿ ಈ ಬಗ್ಗೆ ವಿಷಯ ಮಂಡಿಸಿದರು. ಕಾರ್ಯದರ್ಶಿ ಅಬ್ದುಲ್ ರಜಾಕ್ ಕಾಸಿಮಿ ಸ್ವಾಗತಿಸಿದರು. ಮುಸ್ತಫಾ ಸಖಾಫಿ ವಂದಿಸಿದರು. ನೂರ್ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News