ಲೋರೆಟ್ಟೊ ಮಾತಾ ಚರ್ಚ್‍ನಲ್ಲಿ ಕ್ರಿಸ್ಮಸ್ ಆಚರಣೆ

Update: 2019-12-25 13:54 GMT

ಬಂಟ್ವಾಳ, ಡಿ. 25: ಲೋರೆಟ್ಟೊ ಮಾತಾ ಚರ್ಚ್‍ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಯಂಕಾಲದ ಬಲಿಪುಜೆಯಲ್ಲಿ ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಅರ್ಪಿಸಿದರು. ಬಲಿಪೂಜೆಗೆ ಸಹಕರಿಸಿದ ಧಾನಿಗಳಿಗೆ ಗೌರವ ಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.

ಪ್ರಧಾನ ಧರ್ಮ ಗುರು ಜೊಸ್ಸಿ ಲೋಬೊ, ಚರ್ಚ್ ಧರ್ಮಗುರುಗಳಾದ ಎಲಿಯಸ್ ಡಿಸೋಜಾ, ದಿಲ್ರಾಜ್ ಸಿಕ್ವೆರ,ವಂ.ಚಾಲ್ರ್ಸ್ ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಮುಖ್ಯತೆಯ ಬಗ್ಗೆ ಪ್ರವಚನ ನೀಡಿದರು.

ಚರ್ಚ್‍ನ ಮುಂಭಾಗದ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ ಇವರ ಪ್ರಯೋಜಕತ್ವ ದಿಂದ ವಿದ್ಯುಡಿಪಾಲಂಕರದಿಂದ ಅಲಂಕಾರಗೊಂಡಿತ್ತು. ಚರ್ಚ್‍ನ್ನು ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ನಿಂದ ಸಂಸ್ಕೃತಿಕ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು. ಲೋರೆಟ್ಟೊ ಐಸಿವೈಮ್‍ಗೆ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಚರ್ಚ್ ಗಾರ್ಡನ್‍ನ್ನು, ನಾಮಫಲಕವನ್ನೂ ನೆರೆದಿದ್ದ ಧರ್ಮಗುರುಗ ಉದ್ಘಾಟನೆ ಮಾಡಿದರು. ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು. ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಧರ್ಮಗುರುಗಳು ಸರ್ವರರನ್ನು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News