12 ಅಡಿ ಎತ್ತರದ ಪೇಪರ್‌ಕಪ್ ಸಾಂತಾಕ್ಲಾಸ್ ಅನಾವರಣ

Update: 2019-12-25 16:22 GMT

ಮಣಿಪಾಲ, ಡಿ.25: ಸರಳೆಬೆಟ್ಟುವಿನ ಹೊಸಬೆಳಕು ಆಶ್ರಮದಲ್ಲಿ ಮಣಿ ಪಾಲದ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹೀರೆಬೆಟ್ಟು ಪೇಪರ್‌ಕಪ್‌ನಿಂದ ರಚಿಸಿರುವ 12 ಅಡಿ ಎತ್ತರದ ಪರಿಸರ ಸ್ನೇಹಿ ಸಾಂತಾಕ್ಲಾಸ್ ಅನಾವರಣಗೊಳಿಸುವುದರ ಮೂಲಕ ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ದಿನೇಶ್ ಹೆಗ್ಡೆ ಹಾಗೂ ಎಂಐಟಿಯ ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ ಸಾಂತಾಕ್ಲಾಸ್ ಜೊತೆಗೆ ಸೆಲ್ಫಿ ಕ್ಲಿಕಿಸುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ವಿಜಯಲಕ್ಷ್ಮೀ ಸರಳೆಬೆಟ್ಟು, ಹೊಸಬೆಳಕು ಸಂಸ್ಥೆಯ ಸಂಸ್ಥಾಪಕ ತನುಲಾ ತರುಣ್, ವಿನಯಚಂದ್ರ ಉಪಸ್ಥಿತರಿದ್ದರು.

ಈ ಕಲಾಕೃತಿಯ ಪ್ರದರ್ಶನವು ನಾಳೆಯಿಂದ 10 ದಿನಗಳ ಕಾಲ ನಡೆಯ ಲಿದೆ. ಈ ಕಲಾಕೃತಿಗೆ 2500ಕ್ಕೂ ಅಧಿಕ ಪೇಪರ್ ಕಪ್‌ಗಳನ್ನು ಬಳಕೆ ಮಾಡ ಲಾಗಿದೆ. ಎಲ್ಲೆಂದರಲ್ಲಿ ಎಸೆದಿರುವ ಮಧ್ಯದ ಬಾಟಲಿಯನ್ನು ಸಂಗ್ರಹಿಸಿ ಕಲಾಕೃತಿಯನ್ನಾಗಿ ರಚಿಸುವ ಕಾರ್ಯಗಾರವನ್ನು ಕೂಡ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿವಾನಂದ ಪರ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News