ಮಂಗಳೂರು ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆ ನಡೆಯಲಿ: ಸಮಸ್ತ

Update: 2019-12-25 16:46 GMT

ಮಂಗಳೂರು: ಎನ್.ಆ.ಸಿ ಮತ್ತು ಸಿಎಎ ವಿರುದ್ಧ ಇತ್ತೀಚೆಗೆ ಮಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವವರ ಮೇಲೆ ಏಕಾಏಕಿ ಗೋಲಿಬಾರ್ ನಡೆಸಿದ ವೇಳೆ ಪೊಲೀಸರ ಗುಂಡಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದು, ಹಲವರು  ಗಾಯಗೊಂಡು ಆಸ್ಪತ್ರೆ ಸೇರಿರುತ್ತಾರೆ. ಪೊಲೀಸರ ಈ ಕ್ರಮ ಖಂಡನೀಯವಾಗಿದ್ದು ಇದರ ಕುರಿತು ಸಂಬಂಧಪಟ್ಟ ಇಲಾಖೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಆಗ್ರಹಿಸಿಸಿದೆ.

ಗೋಲಿಬಾರ್ ಗೆ ಬಲಿಯಾದ ನೌಷೀನ್ ಕುದ್ರೋಳಿ ಹಾಗೂ ಜಲೀಲ್ ರವರ ಮನೆಗೆ ಸಮಸ್ತ ನಾಯಕರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಜಂಇಯ್ಯತುಲ್ ಮುದರ್ರಿಸೀನ್ ಜಿಲ್ಲಾಧ್ಯಕ್ಷರಾದ ಕೆ.ಎಂ ಉಸ್ಮಾನ್ ಫೈಝಿ ತೋಡಾರ್, ಪ್ರ.ಕಾರ್ಯದರ್ಶಿ ಹೈದರ್ ದಾರಿಮಿ ಕರಾಯ, ದ.ಕ ಜಿಲ್ಲಾ ಜಂಇಯ್ಯತುಲ್ ಖುತಬಾ ಪ್ರ.ಕಾರ್ಯದರ್ಶಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ತೋಡಾರು, ಕೋಶಾಧಿಕಾರಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ವರ್ಕಿಂಗ್ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಕಾರ್ಯದರ್ಶಿ ರಶೀದ್ ರಹ್ಮಾನಿ ಕೋಲ್ಪೆ, ಶೈಖ್ ಮುಹಮ್ಮದ್ ಇರ್ಫಾನಿ, ಕುದ್ರೋಳಿ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಆರಿಫ್ ಬಡಕಬೈಲು , ಹನೀಫ್ ದೂಮಳಿಕೆ, ಇಬ್ರಾಹಿಂ ಕೊಣಾಜೆ, ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು, ಹಕೀಂ ಪರ್ತಿಪ್ಪಾಡಿ, ಶರೀಫ್ ಮಳಲಿ, ಕಾರ್ಪೊರೇಟರ್ ಶಂಸುದ್ದೀನ್ ಎಚ್ .ಬಿ .ಟಿ, ಎನ್.ಕೆ ಅಬೂಬಕರ್ ಕುದ್ರೋಳಿ, ಎಸ್ ಕೆ ಎಸ್ ಎಸ್ ಎಫ್ ಕುದ್ರೋಳಿ ಶಾಖಾಧಕ್ಷ ಇಸ್ಮಾಯಿಲ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News