ಸಿದ್ದಕಟ್ಟೆ: ದೇವಸ್ಥಾನದಿಂದ ನಗದು ಕಳವು

Update: 2019-12-26 08:35 GMT

ಬಂಟ್ವಾಳ, ಡಿ.26: ಸಿದ್ದಕಟ್ಟೆಯ ಸಂಗಬೆಟ್ಟುನಲ್ಲಿರುವ ಪಣಂಬೂರು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು 2 ಕಾಣಿಕೆ ಡಬ್ಬಿಗಳಿಂದ ನಗದು ಕಳವುಗೈದ ಘಟನೆ ಗುರುವಾರ ಮುಂಜಾನೆ 2:30 ಸುಮಾರಿಗೆ ನಡೆದಿದ್ದು, ಕಳವು ಕೃತ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ಶ್ರೀವೀರಭದ್ರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ಬಳಿಕ ಕಾಣಿಕೆ ಡಬ್ಬಿ ಎರಗಿಸಿ, ಅದರಲ್ಲಿದ್ದ ನಗದು ತೆಗೆದು ಡಬ್ಬಿಯನ್ನು ಎಸೆದು ಹೋಗಿದ್ದಾರೆ. ಹಾಗೂ ಇನ್ನೊಂದು ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿರುವುದಾಗಿ ಬಳಿಕ ಗರ್ಭಗುಡಿಯ ಒಳಹೊಕ್ಕಲು ವಿಫಲ ಪ್ರಯತ್ನ ನಡೆದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇಂದು ಬೆಳಗ್ಗೆ ಅರ್ಚಕರು ದೇವಸ್ಥಾನ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಗುರಿಕಾರರಿಗೆ ಮಾಹಿತಿ ನೀಡಿದ್ದಾರೆ.

ದೇವಸ್ಥಾನದಿಂದ ಎರಡು ಡಬ್ಬಿಗಳಲ್ಲಿದ್ದ ನಗದು ಕಳವಾಗಿದ್ದು, ದೇವಸ್ಥಾನದಿಂದ ಯಾವುದೇ ಬೆಲೆಬಾಳುವ ಸೊತ್ತುಗಳು ಕಳವಾಗದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಸೈ ಪ್ರಸನ್ನ ತಿಳಿಸಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ವೀರಭದ್ರ ಹಾಗೂ ಮಹಾಮ್ಮಾಯಿ ದೇವಸ್ಥಾನದ ನವೀಕರಣಗೊಂಡು ಇತ್ತೀಚೆಗೆ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News