ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ರೊಬೊಟ್ ಸಶ್ತ್ರ ಚಿಕಿತ್ಸೆ

Update: 2019-12-27 11:58 GMT

ಮಂಗಳೂರು, ಡಿ. 27: ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಲಭ್ಯವಿರುವ ಶಸ್ತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಉತ್ಕೃಷ್ಟ ಸಂಶೋಧನೆ ಎನ್ನಬಹುದಾದ ರೊಬೊಟ್ ಸಹಾಯಕ ಸಶ್ತ್ರ ಚಿಕಿತ್ಸಾ ವ್ಯವಸ್ಥೆಗೆ ಅಗತ್ಯವಿರುವ ಯಂತ್ರವನ್ನು ಅಳವಡಿಸಿ ಶೀಘ್ರದಲ್ಲಿ ರೊಬೊಟ್ ಶಸ್ತ್ರ ಚಿಕಿತ್ಸೆ ಆರಂಭಿಸಲಾಗುವುದು ಎಂದು ಡಾ. ಪ್ರೀತಂ ಶರ್ಮಾ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ವಿಶ್ವ ದೆಲ್ಲೆಡೆ ಈ ರೀತಿಯ ಆಧುನಿಕ ರೊಬೊಟ್ ಯಂತ್ರಗಳನ್ನು ಪೂರೈಯಿಸುವ ಏಕೈಕ ಸಂಸ್ಥೆಯಾದ ‘ಡಿ ವಿನ್ಸಿ -4 ’ ರೊಬೊಟ್ ಸಹಾಯಕ ಶಸ್ತ್ರ ಚಿಕಿತ್ಸೆ ಎನ್ನುವ ಅತ್ಯಂತ ಸುಧಾರಿತ ಶಸ್ತ್ರ ಚಿಕಿತ್ಸಾ ವಿಧಾನ ಇದಾಗಿದೆ. ದೇಶದಲ್ಲಿ ಸುಮಾರು 70 ಈ ರೀತಿಯ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದೆ. ಸುಮಾರು 15 ಕೋಟಿ ರೂ ವೆಚ್ಚದ ಯಂತ್ರದ ಮೂಲಕ ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರ ಉಪಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ.

ರೊಬೊಟ್ ಎಂದರೆ ಸ್ವಯಂ ಚಾಲಿತ ಯಂತ್ರ ಮಾನವ. ಪ್ರಸ್ತುತ ಶಸ್ತ್ರ ಚಿಕಿತ್ಸೆಯಲ್ಲಿ ಶಸ್ತ್ರ ಚಿಕಿತ್ಸಕನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ಬದಲು ಶಸ್ತ್ರ ಚಿಕಿತ್ಸಕನಿಗೆ ನೆರವು ನೀಡುವ ಸ್ವಯಂ ಚಾಲಿತ ಉಪಕರಣದ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ರೊಬೊಟ್ ಮೂಲಕ ಓರ್ವ ಶಸ್ತ್ರ ಚಿಕಿತ್ಸಕ ಹೆಚ್ಚು ನಿಖರವಾಗಿ, ಹೆಚ್ಚು ಶ್ರಮ ಪಡದೆ ಕ್ಲಿಷ್ಟವಾದ ಶಸ್ತ್ರ ಚಿಕಿತ್ಸೆಯನ್ನು ಇನ್ನಷ್ಟು ನಿಖರವಾಗಿ ಮಾಡಲು ಅನುಕೂಲಕರವಾಗಲಿದೆ. ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿಲ್ಲ, ಶೀಘ್ರ ಚೇತರಿಕೆ, ಅತ್ಯಂತ ಕಡಿಮೆ ನೋವು, ಆರಾಮದಾಯಕ, ಶಸ್ತ್ರ ಚಿಕಿತ್ಸೆಗೆ ಅತ್ಯಂತ ಸಣ್ಣ ಪ್ರಮಾಣದ ಗಾಯ, ಸೋಂಕು ಪ್ರಮಾಣ ಅತ್ಯಂತ ಕನಿಷ್ಠವಾಗಿದೆ. ಶೀಘ್ರ ಉತ್ತಮ ಫಲಿತಾಂಶ, ಶೀಘ್ರ ಗುಣಮುಖರಾಗಲು ಸಹಕಾರಿಯಾಗಿದೆ ಎಂದು ಡ.ಪ್ರೀತಂ ಶರ್ಮಾ ಪ್ರಾತ್ಯಕ್ಷತೆಯೊಂದಿಗೆ ವಿವರಿಸಿದರು.

ಈ ರೊಬೊಟ್ ತಂತ್ರಜ್ಞಾನದ ಚಿಕಿತ್ಸೆಯನ್ನು ಹೊಟ್ಟೆ ಮತ್ತು ಎದೆಯ ಭಾಗದ ಎಲ್ಲಾ ರೀತಿಯ ಶಸ್ತ್ರ ಚಿಕಿತ್ಸೆಗೆ ,ಸ್ತ್ರೀರೋಗ, ಕರುಳಿನ ಶಸ್ತ್ರ ಚಿಕಿತ್ಸೆ , ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಬೆರೆಯಾಟ್ರಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. 2001ರಲ್ಲಿ ಆರಂಭವಾದ ಎ.ಜೆ.ಆಸ್ಪತ್ರೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸುವುದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಎ.ಜೆ.ಶೆಟ್ಟಿ ಯವರ ಕನಸಾಗಿದೆ. ದೇಶದಲ್ಲಿ ಲಭ್ಯವಿರುವ ಅತ್ಯತ್ತಮ ವೈದ್ಯಕೀಯ ಸೌಲಭ್ಯಗಳೆಲ್ಲವನ್ನು ಸಂಸ್ಥೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಎ.ಜೆ.ಆಸ್ಪತ್ರೆ ವೈದ್ಯಕೀಯ ಉಪಕರಣಗಳನ್ನು ಮಂಗಳೂರಿಗೆ ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಎ.ಜೆ.ಆಸ್ಪತ್ರೆಯದಾಗಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲಾ ಅವರ ಅಭಿಪ್ರಾಯವಾಗಿದೆ.

ಈ ರೀತಿಯ ಅತ್ಯಾಧುನಿಕ ಸುಧಾರಿತ ಶಸ್ತ್ರ ಚಿಕಿತ್ಸಾ ಮಾಹಿತಿಯನ್ನು ರೋಗಿಗಳ ಮತ್ತು ಅನುಕೂಲಕ್ಕಾಗಿ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿರುವುದಾಗಿ ಡಾ.ಪ್ರೀತಂ ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News