ಕಿನ್ಯ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2019-12-27 17:05 GMT

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಸಿಎಎ ವಿರೋಧಿಸಿ ಕಿನ್ಯ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ಕಿನ್ಯ ನಾಗರಿಕ ಒಕ್ಕೂಟ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಶುಕ್ರವಾರ ಜುಮಾ ನಮಾಝ್  ಬಳಿಕ ಪ್ರತಿಭಟನೆ ನಡೆಯಿತು.

ಕಿನ್ಯ ನಾಗರಿಕ ಒಕ್ಕೂಟ ಹಾಗೂ ಸಮಾನ ಮನಸ್ಕ ಸಂಘಟನೆಗಳ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಮಾತನಾಡಿ, ಎನ್.ಆರ್.ಸಿ ಮತ್ತು ಸಿ.ಎ.ಎಯ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದರ ಒಂದು ಭಾಗವಾಗಿ ಕಿನ್ಯ ಗ್ರಾಮದ ನಾಗರಿಕ ಒಕ್ಕೂಟ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಟ್ಟು ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರಕಾರವು ಶೀಘ್ರವೇ ಈ ಕಾಯ್ದೆಯನ್ನು ಕೈಬಿಡಬೇಕೆಂದು ಹೇಳಿದರು.

ಖಲೀಲ್ ಅಝಹರಿ ಕಿನ್ಯ, ಮೆಹಬೂಬು ಸಖಾಫಿ ಕಿನ್ಯ, ರಿಯಾಝುರ್ರಹ್ಮಾನಿ ಕಿನ್ಯ, ಎನ್.ಕೆ.ಮೊಹಮ್ಮದ್ ಕಿನ್ಯ ದಿಕ್ಸೂಚಿ ಮಾತನಾಡಿದರು. ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಹಮೀದ್ ಕಿನ್ಯ, ಅಬೂಸಾಲಿ, ಮೊಹಮ್ಮದ್ ಮತ್ತು ಸಮಾನ ಮನಸ್ಕರು ಉಪಸ್ಥಿತರಿದ್ದರು.

ಕಿನ್ಯ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಫತಾಹ್ ಫೈಝಿ ದುಆ ನೆರವೇರಿಸಿದರು. ನಾಗರಿಕ ಸಮಿತಿ ಒಕ್ಕೂಟದ ಕಾರ್ಯದರ್ಶಿ ಫಾರೂಕ್ ಕಿನ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News