ಪೇಜಾವರ ಶ್ರೀ ಆರೋಗ್ಯ ಗಂಟೆಯಿಂದ ಗಂಟೆಗೆ ಕ್ಷೀಣ: ಶೋಭಾ ಕರಂದ್ಲಾಜೆ

Update: 2019-12-28 11:41 GMT

ಉಡುಪಿ, ಡಿ. 28: ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಮಧ್ಯಾಹ್ನ ವೇಳೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯವನ್ನು ವಿಚಾರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕರಂದ್ಲಾಜೆ, ಪೇಜಾವರ ಸ್ವಾಮೀಜಿಗಳ ದರ್ಶನ ಪಡೆದಿದ್ದೇನೆ. ಮಣಿಪಾಲ ವೈದ್ಯರು ಇತರ ವೈದ್ಯರ ಸಲಹೆ ಪಡೆದುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಸ್ವಾಮೀಜಿಯ ಆರೋಗ್ಯ ದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ಆರೋಗ್ಯವು ಗಂಟೆಯಿಂದ ಗಂಟೆಗೆ ಕ್ಷೀಣವಾಗುತ್ತಿದೆ. ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಮಣಿಪಾಲ ಆಸ್ಪತ್ರೆಗೆ ಆಗಮಿಸಿ, ಪೇಜಾವರ ಸ್ವಾಮೀಜಿಯ ದರ್ಶನ ಪಡೆಯಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News