ಡಿ.29ರಂದು ಮಂಚಿಯಲ್ಲಿ ಬೃಹತ್ ನೇತ್ರ ತಪಾಸಣಾ, ಚಿಕಿತ್ಸಾ ಶಿಬಿರ

Update: 2019-12-28 15:42 GMT

ಕೊಣಾಜೆ : ಕರ್ಣಾಟಕ ಬ್ಯಾಂಕ್ ಮಂಚಿ ಶಾಖೆಯ ಸುವರ್ಣಮಹೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು
ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕಣ್ಣಿನ ಪೊರ ಚಿಕಿತ್ಸಾ ಶಿಬಿರ ಡಿ. 29ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ‌ ನಡೆಯಲಿದೆ.

ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಉಚಿತ ಗ್ಲಾಕೋಮ ಕಣ್ಣಿನ ತಪಾಸಣೆ ಹಾಗೂ ಮೊದಲ 50 ರೋಗಿಗಳಿಗೆ ಕಣ್ಣಿನ ಪೊರೆ (Cataract-SICS) ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುವುದು ಎಂದು ಪ್ರಕಟನೆ‌ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News