ಲಯನ್ಸ್ ಕ್ಲಬ್ ನ ಪ್ರಾಂತ ‘ದಿಶಾ ಸಮ್ಮೇಳನ’

Update: 2019-12-30 15:15 GMT

ಮಂಗಳೂರು, ಡಿ.30: ಬಡತನ ಯಾವ ದೇಶದಲ್ಲಿದೆಯೋ ಅದು ಆ ದೇಶದ ಅಭಿವೃದ್ಧಿಗೆ ಮಾರಕ. ಆ ಹಿನ್ನೆಲೆಯಲ್ಲಿ ಸಮಾಜ ದಲ್ಲಿರುವ ಕಟ್ಟಕಡೆಯ ಜನರಿಗೂ ನಮ್ಮಿಂದಾದ ಆರ್ಥಿಕ ಸಹಾಯ ಮಾಡುವ ದೊಡ್ಡಗುಣ ಪ್ರತಿಯೊಬ್ಬರಲ್ಲೂ ಬೇಕಾಗಿದೆ. ಲಯನ್ಸ್ ಆ ಕಾರ್ಯದಲ್ಲಿ ನಿರತವಾಗಿರುವುದು ಶ್ಲಾಘನೀಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ರವಿವಾರ ನಡೆದ ಲಯನ್ಸ್ ಕ್ಲಬ್ ಪ್ರಾಂತ ದಿಶಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ನಿರ್ದಿಷ್ಠ ಗುರಿಯೊಂದಿಗೆ ಜಾತಿ, ಭೇದರಹಿತವಾಗಿ ಒಂದು ಕುಟುಂಬ, ಸಮಾಜದ ಅಭಿವೃದ್ಧಿ, ಆರ್ಥಿಕ ಸದೃಢತೆ ಬೆಳೆಯುವಂತಾ ಗಲು ಯಾರು ಪ್ರಯತ್ನ ಮಾಡುವನೋ ಅವನೇ ನಿಜವಾದ ನಾಯಕ. ಪರಸ್ಪರ ಸಹಕಾರ ಮನೋಭಾವನೆ, ಇನ್ನೊಬ್ಬನನ್ನು ಮುಂದಕ್ಕೆ ಕೊಂಡೊಯ್ಯುವ ಇಲ್ಲವೇ ಸಹಕಾರ ನೀಡುವ ಗುಣ ನಾಯಕನಿಗೆ ಅಗತ್ಯ. ಭಾಷಣ ಮಾಡುವುದು ಎಂದಿಗೂ ಸಾಧನೆ ಆಗಿರಬಾರದು ಎಂದು ಯಡಪಡಿತ್ತಾಯ ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸುಧಾಕರ ಆಚಾರ್ಯ, ಶ್ರಿನಿವಾಸ ಪೂಜಾರಿ, ಕೃಷ್ಣಪ್ಪಪೂಜಾರಿ, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಡಾ.ಶಿಲ್ಪಾಶರತ್ ಶೆಟ್ಟಿ, ಕರುಣಾಕರ ಶೆಟ್ಟಿ, ಉಮಿಯ ರಾಧಾಕೃಷ್ಣ ರೈ -ಸುರೇಖ ಆರ್.ರೈ ಅವರನ್ನು ಸನ್ಮಾನಿಸಲಾಯಿತು.

ಸಮಾಜ ಸೇವಕಿ ಸಂಧ್ಯಾ ಶೆಣೈ, ಲಯನ್ಸ್ 317ರ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್, ಅನಿತಾ ಗೋಮ್ಸ್, ಜಿಲ್ಲಾ 317ರ ನಿಕಟಪೂರ್ವ ರಾಜ್ಯಪಾಲ ದೇವದಾಸ್ ಭಂಡಾರಿ, ಮುಖ್ಯ ಸಲಹೆಗಾರರಾದ ವಸಂತ ಕುಮಾರ್ ಶೆಟ್ಟಿ, ಸುಧಾಕರ ಆಚಾರ್ಯ, ಮೋಹನ್‌ದಾಸ್ ಕಿಲ್ಲೆ, ಕೆ.ಸಿ.ನಾರಾಯಣ್, ಶಿವಾನಂದ ಬಾಳಿಗ, ದಿಶಾ ಕಾರ್ಯದರ್ಶಿ ಸುಖಲತಾ ಭಂಡಾರಿ, ಕೋಶಾಧಿಕಾರಿ ಮೋಹನ್‌ದಾಸ್ ಶೆಟ್ಟಿ, ಪ್ರಥಮ ರಾಜ್ಯಪಾಲ ಗೀತ್ ಪ್ರಕಾಶ್ ಉಪಸ್ಥಿತರಿದ್ದರು.

ದಿಶಾ ಅಧ್ಯಕ್ಷ ಶ್ರೀನಾಥ್ ಕೊಂಡೆ ಸ್ವಾಗತಿಸಿದರು. ದಿವ್ಯ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News