ಕೊಂಬಗುಡ್ಡೆ: ಪಿಎಫ್‌ಐಯಿಂದ ರಕ್ತದಾನ ಶಿಬಿರ

Update: 2019-12-30 16:31 GMT

ಕಾಪು, ಡಿ.30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾಪು ವಿಭಾಗ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಕೊಂಬಗುಡ್ಡೆಯ ಗೌಸಿಯಾ ಮದ್ರಸದಲ್ಲಿ ರವಿವಾರ ಏರ್ಪಡಿಸಲಾಗಿತ್ತು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತ ನಿಧಿಯ ಮುಖ್ಯಸ್ಥೆ ಹಾಗೂ ವೈದ್ಯ ಡಾ.ವೀಣಾ ಕುಮಾರಿ ಮಾತನಾಡಿ, ರಕ್ತದಾನದಿಂದ ಆರೋಗ್ಯ ವೃದ್ದಿಸುವುದೆ ಹೊರತು ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಪಿಎಫ್‌ಐ ಪಡುಬಿದ್ರಿ ವಿಭಾಗದ ಅಧ್ಯಕ್ಷ ಹನೀಫ್ ಮೂಳುರು ಮಾತನಾಡಿ ದರು. ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಉಡುಪಿ, ಕಾರ್ಯದರ್ಶಿ ಫಯಾಜ್ ಮಲ್ಪೆ, ಸಮಾಜ ಸೇವಕರಾದ ಮುನೀರ್ ಕಲ್ಮಾಡಿ, ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ರಾರ್ ಉಚ್ಚಿಲ, ಕೊಂಬಗುಡ್ಡೆ ಜಾಮಿಯಾ ಮಸ್ಜೀದ್ ಅಧ್ಯಕ್ಷ ಶಬೀ ಅಹ್ಮದ್ ಕಾಝಿ, ಗೌಸಿಯಾ ಮಸೀದಿಯ ಅಧ್ಯಕ್ಷ ನಸೀರ್ ಅಹಮ್ಮದ್, ಸಮಾಜ ಸೇವಕ ಸಾದಿಕ್ ದೀನರ್, ಸಮಾಜ ಸೇವಕ ಸುಧಾಕರ್ ಶೆಟ್ಟಿ, ನಜೀರ್ ಅಹ್ಮದ್ ಪ್ಲೈವುಡ್, ಮಜೂರು ಬದ್ರಿಯ ಮಸೀದಿ ಅಧ್ಯಕ್ಷ ಎಂ.ಎಚ್.ಹವಿುೀದ್, ಅದಂ ಸಾಬ್ ಉಪಸ್ಥಿತರಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾಪು ವಿಭಾಗದ ಅಧ್ಯಕ್ಷ ಸಾಧಿಕ್ ಕೆ.ಪಿ. ಸ್ವಾಗತಿಸಿದರು. ಮೈನುದ್ದಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಒಟ್ಟು 120 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News