ಫೆ. 11: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಫೌಂಡೇಶನ್ ಡೇ ಉಪನ್ಯಾಸ

Update: 2020-02-08 15:52 GMT

ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆಇಸಿ) ತನ್ನ ಹತ್ತೊಂಬತ್ತನೇ ಶಿಲಾನ್ಯಾಸ ದಿನಾಚರಣೆಯ ಅಂಗವಾಗಿ ವಾರ್ಷಿಕ ಫೌಂಡೇಶನ್ ಡೇ ಉಪನ್ಯಾಸವನ್ನು ಫೆ. 11ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ನಡೆಸಲಿದೆ.

ಸಾಮಾಜಿಕ ಉದ್ಯಮಿ ಮತ್ತು ಸನ್‍ರೈಸ್ ಸಿಎಸ್‍ಪಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ದೀಪಕ್ ಗಾಧಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ತನ್ನ ಆವಿಷ್ಕಾರಯುತ ನಾಯಕತ್ವಕ್ಕೆ ಹೆಸರುವಾಸಿಯಾದ ಶ್ರೀ ಗಾಧಿಯಾ ಅವರು ಗಾಧಿಯಾ ಸೋಲಾರ್ ಎನರ್ಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕರು ಮತ್ತು ಸ್ಟಾರ್ಟ್ ಅಪ್ ಬಯೋಗ್ಯಾಸ್ ಕಂಪನಿಯಾದ ಎಕ್ಸಲೆಂಟ್ ರಿನ್ಯೂಯಬಲ್ ಪ್ರೈವೇಟ್ ಲಿಮಿಟೆಡ್ (ಇಆರ್‍ಪಿಎಲ್)ನ ಸಹ ಸಂಸ್ಥಾಪಕರೂ ಆಗಿದ್ದಾರೆ.

ಅವರು ವಡೋದರಾದ ಮುನಿ ಸೇವಾ ಆಶ್ರಮ (ಎಂಎಸ್‍ಎ) ಮತ್ತು ಆಶ್ರಮದಲ್ಲಿ ನವೀಕರಿಸಬಹುದಾದ ಇಂಧನ, ಸುಸ್ಥಿರತೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ನೋಡಿಕೊಳ್ಳುವ ಎಂಎಸ್‍ಎ ರೆನ್ಯೂಟೆಕ್ ಫೌಂಡೇಶನ್‍ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ಶ್ರೀ ಗಾಧಿಯಾ ಅವರು "ಸೌರ ಸಾಂದ್ರತೆಯ ವಿಕಸನ: ಸೌರಶಕ್ತಿಯ ಹೊಸತನಗಳಲ್ಲಿ ಸಾಮಾಜಿಕ ಉದ್ಯಮಿಗಳ ಪ್ರಯಾಣ" ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News