ಐಡಿಎಸ್ ಡಿಸೈನ್ ಫೆಸ್ಟ್: 'ಎಕೆ ಇಂಟೀರಿಯರ್ ಡಿಸೈನ್ ಅವಾರ್ಡ್ 2020'

Update: 2020-02-09 03:27 GMT

ಮಂಗಳೂರು : ಇಂಡಿಯನ್ ಡಿಸೈನ್ ಸ್ಕೂಲ್ ಆತಿಥ್ಯದಲ್ಲಿ ಪ್ರಥಮ ಕಾಲೇಜ್ ದಿನಾಚರಣೆ ಮತ್ತು 'ಎಕೆ -ಇಂಟೀರಿಯರ್ ಡಿಸೈನ್ ವೊವ್ ಅವಾರ್ಡ್ 2020' ಕಾರ್ಯಕ್ರಮ ನಗರದ ತಾಜ್ ಗೇಟ್‌ವೇಯಲ್ಲಿ ಶುಕ್ರವಾರ ನಡೆಯಿತು.

ಎಕೆ -ಇಂಟೀರಿಯರ್ ಡಿಸೈನ್ ವಾವ್ ಅವಾರ್ಡ್ 2020 ಅಂಗವಾಗಿ ಡಿಸೈನ್ ಹಿನ್ನೆಲೆಯ ಮೂಲಕ ಕೊಡುಗೆ ನೀಡಿದ ಸಂಸ್ಥೆ, ವ್ಯಕ್ತಿಗಳನ್ನು ಮತ್ತು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಐಡಿಎಸ್ ಡಿಸೈನ್ ಉತ್ಸವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಶಸ್ತಿ ವಿತಣಾ ಸಮಾರಂಭದಲ್ಲಿ ಐಐಐಡಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಖ್ಯಾತ ಡಿಸೈನರ್ ಗಾಯತ್ರಿ ಶೆಟ್ಟಿ ಮತ್ತು ಶ್ಯಾಮಲಾ ಪ್ರಭು, ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರೊ. ಕಿಶೋರಿ ನಾಯಕ್, ಎ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ಮುಹಮ್ಮದ್, ವ್ಯವಸ್ಥಾಪಕ ನಿರ್ದೇಶಕ ಎ.ಕೆ.ನಿಯಾಝ್, ಎ.ಕೆ.ಗ್ರೂಫ್‌ನ ನಿರ್ದೇಶಕರಾದ ಅಬ್ದುಲ್ ರಝಾಕ್ ಟಿ, ಎ.ಕೆ.ನಾಝಿಮ್, ಎ.ಕೆ.ನೌಶಾದ್, ಎ.ಕೆ.ಸಾಜಿದ್ ಮತ್ತು ಅನಿಲ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅತ್ಯುತ್ತಮ ವಾಸದ ಮನೆ (ವಿಲ್ಲಾ ) ವಿನ್ಯಾಸ ವಿಭಾಗದಲ್ಲಿ ಎ.ಎಚ್. ಶೆಹನಾಝ್, ಅತ್ಯುತ್ತಮ ವಸತಿ ಅಪಾರ್ಟ್‌ಮೆಂಟ್ ವಿನ್ಯಾಸ ವಿಭಾಗದಲ್ಲಿ ಮೆಹರಾಝ್ ಯೂಸುಫ್, ವಾಣಿಜ್ಯ ವಿಭಾಗದ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ ಸ್ಫೂರ್ತಿ ಆಳ್ವಾ, ಅತ್ಯುತ್ತಮ ವಿನ್ಯಾಸ ವಿದ್ಯಾರ್ಥಿಗಳ ವಿಭಾಗದಲ್ಲಿ ದರ್ಶನ್ ಚಿತ್ತರಂಜನ್ ಮತ್ತು ಸುಮೇಧ ಮುಖರ್ಜಿ, ಕ್ರೀಯೇಟಿವ್ ಕಾಂಪಿಟೀಶನ್ ವಿಭಾಗದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಲಿಶ್ವಾನ್ ಡಿ ಸೋಜ ಪ್ರಥಮ ಮತ್ತು ದೀರಘ್ ಎಂ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.

ಖ್ಯಾತ ಆರ್ಕಿಟೆಕ್ಟ್ ಕೆ.ಎಸ್.ಶೇರಿಗಾರ್‌ಗೆ ಜೀವ ಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಕೆ -ಐಡಿಡಬ್ಲುಎ ವತಿಯಿಂದ ಸೀಮಿತ ಕಾಲಾವಧಿಯ ಡಿ ಸೈನ್ ಸರ್ಟಿಫಿಕೇಟ್ ಕೋರ್ಸ್ ನ್ನು ಐಡಿಎಸ್ ನಿರ್ದೇಶಕಿ ಡಾ. ನಫೀಸ ಶಿರಿನ್ ಮತ್ತು ಶೆಫರ್ಡ್ ಇಂಟರ್‌ ನ್ಯಾಶನಲ್ ಅಕಾಡೆಮಿಯ ಎಚ್.ಆರ್ ನಿರ್ದೇಶಕಿ ಫಾರ್ಯ ಐಡಿಯಾ, ಡಿಸೈನ್ ಫೆಸ್ಟ್ ಮತ್ತು ಎ.ಕೆ.-ಐಡಿಡಬ್ಲು ಎ ಯೋಜನೆಯನ್ನು ರೂಪಿಸಿದ ಐಡಿಎಸ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ನಿಸಾರ್, ನಿರ್ದೇಶಕಿ ಡಾ. ನಫೀಸಾ ಶಿರಿನ್, ಪ್ರಾಂಶುಪಾಲ ರಮಾನಾಥ ನಾಯಕ್ ಉಪಸ್ಥಿತರಿದ್ದರು.

ತಾಜ್ ಗೇಟ್‌ವೇ, ಎ.ಕೆ.ಗ್ರೂಫ್, ಆ್ಯಪ್ಲ್ ಫ್ಲೈ ಮತ್ತು ಇಂಡಿಯನ್ ಸ್ಕೂಲ್ ಕಾರ್ಯಕ್ರಮ ಸಂಯೋಜನೆಗೆ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News