ಸದೃಢ ಭಾರತಕ್ಕೆ ಆರೋಗ್ಯವಂತ ಮಕ್ಕಳು ಅವಶ್ಯಕ: ಶೀಲಾ ಕೆ.ಶೆಟ್ಟಿ

Update: 2020-02-10 15:15 GMT

ಉಡುಪಿ, ಫೆ.10: ಇಂದಿನ ಮಕ್ಕಳೇ ಮುಂದಿನ ಜನಾಂಗ ಅನ್ನುವ ಮಾತೊಂದಿದೆ. ಮಕ್ಕಳು ಭಾರತದ ಭವಿಷ್ಯ. ದೇಶ ಬಲಿಷ್ಠ ಮತ್ತು ಸದೃಢ ವಾಗಿರಬೇಕಾದರೆ ಮುಂದಿನ ಪೀಳಿಗೆ ಆರೋಗ್ಯವಂತರಾಗಿರಬೇಕು. ಹಾಗಿದ್ದಾಗ ಮಾತ್ರ ಸಮರ್ಥ ಭಾರತದ ನಿರ್ಮಾಣ ಸಾಧ್ಯ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರಕಾರಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ತುಂಬಾ ಉಪಯುಕ್ತ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ ಹೇಳಿದ್ದಾರೆ.

ಸೋಮವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ವತಿಯಿಂದ ಕಾಡಬೆಟ್ಟು ಟಿ.ಎ.ಪೈ ಮೋಡರ್ನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕಾರ್ಯಕ್ರಮ ಉ್ಘಾಟಿಸಿ ಅವರು ಮಾತನಾಡುತಿದ್ದರು.

ಮಕ್ಕಳಲ್ಲಿ ಪರಿಪೂರ್ಣ ಆರೋಗ್ಯ ಇದ್ದಾಗ ಶಿಸ್ತುಬದ್ದ ಜನಾಂಗ ರೂಪು ಗೊಳ್ಳುತ್ತದೆ. ಈ ಕಾರಣಕ್ಕಾಗಿ ಶಾಲೆಗಳಲ್ಲಿ ಜಂತುಹುಳ ನಿವಾರಣೆ ಮಾತ್ರೆ ನೀಡುವ ಹಾಗೂ ಲಸಿಕೆ ಹಾಕುವ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಈ ಎಲ್ಲಾ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತದೆ. ಹೊಟ್ಟೆ ಹುಳುವಿನ ಬಾಧೆಯಿಂದಾಗಿ ಮಕ್ಕಳು ಪಾಠ ಕಲಿಯಲು ನಿರಾಸಕ್ತಿ ತೋರುತ್ತಾರೆ. ಇಂತಹ ಸಮಸ್ಯೆಗೆ ಹುಳುವಿನ ಮಾತ್ರೆ ರಾಮಬಾಣದಂತೆ ಕೆಲಸ ನಿರ್ವಹಿಸುತ್ತದೆ. ನಮ್ಮ ಮುಂದಿನ ಪೀಳಿಗೆ ಧೃಢಕಾಯರಾಗಿ, ಆರೋಗ್ಯವಂತ ರಾಗಿ ರೂಪುಗೊಂಡು ಸಮರ್ಥ ಭಾರತ ನಿರ್ಮಿಸಲಿ ಎಂದು ಅವರು ಆಶಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಎಂ.ಜಿ.ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲಾ ಅನುದಾನಿತ, ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಹಾಗೂ ಎಲ್ಲಾ ಕಾಲೇಜುಗಳಲ್ಲಿ ಜಂತುಹುಳ ನಿವಾರಣಾ ಮಾತ್ರೆ ನೀಡುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ 1ರಿಂದ 19ವರ್ಷದವರೆಗಿನ 2,67,828 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಇದೆ. ಪ್ರತಿ ವರ್ಷ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಮಾತ್ರೆ ನೀಡಲಾಗುತ್ತದೆ. ಜಂತುಹುಳುವಿನ ಬಾಧೆಯಿಂದಾಗಿ ಮಕ್ಕಳಲ್ಲಿ ಹಲವಾರು ಆರೋಗ್ಯ ಸಮಸ್ಯೆ ಕಂಡುಬರುತ್ತವೆ. ಶಾಲೆಗೆ ಗೈರುಹಾಜರಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಈ ಸಮಸ್ಯೆಯಿಂದ ಮಕ್ಕಳನ್ನು ಪಾರು ಮಾಡಿ ಅವರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ವರ್ಷದಲ್ಲಿ ಎರಡು ಬಾರಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಶೇಷಶಯನ ಕಾರಿಂಜ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಅಜ್ಜರಕಾಡು ನಗರಸಬಾ ಸದಸ್ಯೆ ರಶ್ಮಿ ಸಿ ಭಟ್, ಕಾಪು ಪುರಸಬಾ ಸದಸ್ಯೆ ರಮಾ ವೈ.ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಟ್ರಸ್ಟಿಗಳಾದ ರಮೇಶ್ ಕಿಣಿ ಹಾಗೂ ರಮೇಶ್‌ರಾವ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ್ ಂಡಾರಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿ ಕಾರಿ ಪ್ರಶಾಂತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ಸಹಾಯಕ ಸತೀಶ್ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಜನಾರ್ಧನ್ ಭಟ್ ವಂದಿಸಿ ದರು. ಇಂದು ಮೊದಲು ಕಾರ್ಯಕ್ರಮದ ಅಂಗವಾಗಿ ಜಾಥಾ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News