ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿಗೆ ಅರ್ಜಿ ಅಹ್ವಾನ

Update: 2020-02-10 16:06 GMT

ಉಡುಪಿ, ಫೆ.10: ಅಸಂಘಟಿತ ವಲಯದ ಕಾರ್ಮಿಕರಾದ ಖಾಸಗಿ ವಾಣಿಜ್ಯ ಚಾಲಕರು, ಹಮಾಲರು, ಟೈಲರುಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕ್ಯಾನಿಕ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಕಟ್ಟಡ ಕಾರ್ಮಿಕರು ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರುಗಳಿಗೆ ಮಾ.1ರಂದು ಶ್ರಮ ಸಮ್ಮಾನ ಪ್ರಶಸ್ತಿ ನೀಡುವ ಸಂಬಂಧ ಅರ್ಜಿ ಅಹ್ವಾನಿಸಲಾಗಿದೆ.

ಅರ್ಹರು ಸಲ್ಲಿಸಬೇಕಾದ ದಾಖಲೆಗಳು, ಅರ್ಜಿ ನಮೂನೆ 5ನ್ನು ಕಾರ್ಮಿಕ ಅಧಿಕಾರಿ ಕಛೇರಿಯಿಂದ ಪಡೆದುಕೊಂಡು ಕಾರ್ಮಿಕರ ಬಳಿ ಇರುವ ಸ್ಮಾರ್ಟ್ ಕಾರ್ಡ್, ವಿದ್ಯಾರ್ಹತೆಯ ಪ್ರಮಾಣ ಪತ್ರ, ಸರ್ವಿಸ್ ಸರ್ಟಿಫಿಕೇಟ್, ಪೋಲೀಸ್ ಇಲಾಖೆಯಿಂದ ಯಾವುದೇ ಪ್ರಕರಣ ಇರುವುದಿಲ್ಲ ವೆಂದು ಮೂಲ ಪ್ರಮಾಣ ಪತ್ರವನ್ನು, ವೃತ್ತಿಯ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರಗಳಿದ್ದಲ್ಲಿ ಲಗತ್ತಿಸಿ ಫೆ.19ರೊಳಗೆ ಕಾರ್ಮಿಕ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ: 201, ಎ ಬ್ಲಾಕ್, ಮೊದಲನೇ ಮಹಡಿ, ರಜತಾದ್ರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಮಣಿಪಾಲ, ಉಡುಪಿ ಜಿಲ್ಲೆ -576120 ಇಲ್ಲಿಗೆ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News