ಜಲಾಶಯಕ್ಕೆ ಹೈಡ್ರೋಲಿಕ್ ಗೇಟ್ ಆಳವಡಿಕೆ: ರಘುಪತಿ ಭಟ್

Update: 2020-02-11 16:23 GMT

ಉಡುಪಿ, ಫೆ.11: ಉಡುಪಿ ನಗರಸಭೆ ಹಾಗೂ ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಕುರಿತ ಸಮಾಲೋಚನಾ ಸಭೆಯು ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಇಂದು ಗರಸಭೆ ಸಭಾಂಗಣದಲ್ಲಿ ಜರಗಿತು.

ಜಲಾಶಯದಲ್ಲಿ ನೀರು ಪೋಲಾಗದಂತೆ ಹೈಡ್ರೋಲಿಕ್ ಗೇಟ್ಗಳನ್ನು ಅಳವಡಿಸಬೇಕು. ನೀರಿನ ಕೊರತೆ ಇರುವ ಪ್ರದೇಶದಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿಗಳನ್ನು ರಿಚಾರ್ಜ್ ಮಾಡಬೇಕು. ನೀರು ಪೂರೈಕೆ ಅವಧಿಯನ್ನು ದಿವಸಕ್ಕೆ 3 ಜೋನ್ನಂತೆ ನಿಗದಿಪಡಿಸಿ 15 ದಿನಗಳವರೆಗೆ ಪ್ರಾಯೋಗಿಕವಾಗಿ ಕಾರ್ಯಾಚರಣೆಯನ್ನು ಮಾಡಬೇಕು. ಕುಡ್ಸೆಂಪ್ ಅಧಿಕಾರಿಗಳಿಗೆ ನೀರಿನ ಕೊರತೆ ಹಾಗೂ ವ್ಯತ್ಯಯದ ಬಗ್ಗೆ ಪರಿಶೀಲನೆ ನಡೆಸಿ ನಿಖರ ಯೋಜನಾ ವರದಿಯನ್ನು ನೀಡಬೇಕು ಎಂದು ಶಾಸಕರು ಸಭೆಯಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಆನಂದ ಕಲ್ಲೋಳಿಕರ್, ನಗರಸಭಾ ಇಂಜಿನಿಯರ್, ಕುಡ್ಸೆಂಪ್ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರು ಗೇಟ್ವಾಲ್ ಆಪರೇಟರ್ಸ್‌ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News