ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರತಿನಿಧಿ ಸಭೆ

Update: 2020-02-11 17:19 GMT

ಮಂಗಳೂರು, ಫೆ.11: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ‘ಅಸ್ಮಿತೆಗಾಗಿ ಪ್ರತಿರೋಧ’ ಎಂಬ ಘೋಷಣೆಯೊಂದಿಗೆ ರಾಜ್ಯ ಪ್ರತಿನಿಧಿ ಸಭೆಯು ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನು ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆಗೈದರು. ಸಭೆಯನ್ನು ಉದ್ಘಾಟಿಸಿ ಮಾತ ನಾಡಿದ ರಾಷ್ಟ್ರೀಯ ಉಪಾಧ್ಯಕ್ಷೆ ನಫೀಸತುಲ್ ಮಿಶ್ರಿಯಾ ಪ್ರಸಕ್ತ ಸನ್ನಿವೇಶದಲ್ಲಿ ಯುವ ಸಮುದಾಯವು ಹೋರಾಟಗಳನ್ನು ಮಾಡುತ್ತಾ ಫ್ಯಾಶಿಸ್ಟ್ ಸರಕಾರದ ವಿರುದ್ಧ ಚಳುವಳಿಗೆ ಕರೆ ನೀಡಿದೆ. ಈ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ವಿಜಯದ ಸಂಕೇತವಾಗಿದೆ ಎಂದರು.

ಈ ಪ್ರತಿನಿಧಿ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಮತ್ತು ವಿಶ್ವವಿದ್ಯಾನಿಲಯಗಳಿಂದ ಪ್ರತಿನಿಧಿಗಳು ಭಾಗವಹಿಸಿದರು. ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಲ್ಲದೆ ರಾಜ್ಯ ಎದುರಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಂಘಟನೆಯ ಮುಂದಿನ ನಡೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಾಕೀರ್ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ವಾರ್ಷಿಕ ವರದಿ ವಾಚಿಸಿದರು. ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ರಿಯಾಝ್ ಪಾಷಾ, ಉಪಾಧ್ಯಕ್ಷ ಅಡ್ವೋಕೇಟ್ ಮುಹಮ್ಮದ್ ಆರಿಫ್, ಕಾರ್ಯದರ್ಶಿಗಳಾದ ಅಥಾವುಲ್ಲಾ, ಅಶ್ವಾನ್ ಸಾದಿಕ್, ಅಶ್ರಫ್ ದಾವಣಗೆರೆ, ಕೋಶಾಧಿಕಾರಿ ಮುಬಾರಕ್ ಉಪಸ್ಥಿತರಿದ್ದರು.

ಸಮಿತಿ ಸದಸ್ಯೆ ಶೈಮಾ ಶರೀಫ್ ಕಾರ್ಯಕ್ರಮ ನಿರೂಪಿಸಿದರು.

ಚರ್ಚಾಕೂಟ: ಪ್ರತಿನಿಧಿ ಸಭೆಯಲ್ಲಿ ‘ಸ್ಟೂಡೆಂಟ್ ಆಕ್ಟಿವಿಸಮ್’ ಎಂಬ ವಿಷಯದಲ್ಲಿ ಸಿಂಪೋಸಿಯಮ್ ಚರ್ಚಾಕೂಟ ನಡೆಯಿತು. ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯ ಸದಸ್ಯ ಅರ್ಶಕ್ ವಯಕಾಡ್, ಪಿಎ ಕಾಲೇಜಿನ ಪ್ರೊ.ಸೈಯ್ಯದ್ ಅಮೀನ್, ಎಚ್‌ಆರ್‌ಡಿಸಿ ಸಂಪನ್ಮೂಲ ವ್ಯಕ್ತಿ ಖಲೀಲ್ ಅಝ್‌ಹರಿ, ಕ್ಯಾಂಪಸ್ ಫ್ರಂಟ್ ಮಾಜಿ ರಾಜ್ಯಾಧ್ಯಕ್ಷ ಕೆಎಂ ತುಫೈಲ್, ಇಕ್ಬಾಲ್ ಬೆಳ್ಳಾರೆ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಚರ್ಚಾಕೂಟ ಸಮಾರೋಪಗೈದರು.

ಪ್ರತಿನಿಧಿ ಸಭೆಯ ನಿರ್ಣಯಗಳು

ನಾಟಕದ ಹೆಸರಿನಲ್ಲಿ ದೇಶದ್ರೋಹದ ಪ್ರಕರಣದಡಿ ಶಹೀನ್ ಸಂಸ್ಥೆಯ ಶಿಕ್ಷಕಿ ಮತ್ತು ಪೋಷಕಿಯ ಬಂಧನ ಹಾಗೂ ಶಾಲಾ ಮಕ್ಕಳ ಮೇಲೆ ಮಾನಸಿಕ ದೌರ್ಜನ್ಯವನ್ನು ಸಭೆಯಲ್ಲಿ ಖಂಡಿಸಲಾಯಿತು. ಎನ್‌ಪಿಆರ್ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು, ಮುಸಲ್ಮಾನ ರಿಗೆ ಜನಸಂಖ್ಯಾಧಾರಿತ ಮೀಸಲಾತಿ ನೀಡಲು, ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು, ಕರ್ನಾಟಕ ಪೊಲೀಸ್ ರಾಜ್ಯ ವಾಗುತ್ತಿರುವುದರ ವಿರುದ್ಧ ಹೋರಾಟ ಮುಂದುವರಿಸಲು ಸಭೆ ನಿರ್ಣಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News