ವಿಟ್ಲ: ಚಿತ್ರನಟಿಯಿಂದ ರಸ್ತೆಯಲ್ಲೇ ರಿಯಲ್ ಫೈಟ್!

Update: 2020-02-12 11:25 GMT

ವಿಟ್ಲ, ಫೆ.12: ವಾಹನಕ್ಕೆ ದಾರಿಬಿಟ್ಟು ಕೊಡುವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ವಿವಾದಕ್ಕೆ ತಿರುಗಿದ ಸಂದರ್ಭ ಚಿತ್ರನಟಿಯೊಬ್ಬರ ಮೇಲೆ ರಸ್ತೆಯಲ್ಲೇ ಹಲ್ಲೆ, ಪ್ರತಿಹಲ್ಲೆ ನಡೆದ ಘಟನೆ ಪೆರುವಾಯಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಈ ಸಂಬಂಧ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಈ ಘಟನೆ ಫೆ.10ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ತುಳು ಸಿನೆಮಾ ನಟಿಯಾಗಿರುವ ಶೋಭಿತಾ ಸಂಚರಿಸುತ್ತಿದ್ದ ಕಾರಿಗೆ ದಾರಿ ಬಿಟ್ಟು ಕೊಡುವ ವಿಚಾರವಾಗಿ ಇನ್ನೊಂದು ಕಾರಿನವರು ತಗಾದೆ ತೆಗೆದಿದ್ದಾರೆ. ಇದೇ ವೇಳೆ ಎರಡು ಕಾರಿನವರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಿಸ್ಥಿತಿ ಹೊಯ್ ಕೈ ಹಂತಕ್ಕೆ ತಲುಪಿದ್ದು, ಶೋಭಿತಾ ಅವರ ಮೇಲೆ ಇನ್ನೊಂದು ಕಾರಿನಲ್ಲಿದ್ದವರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಶೋಭಿತಾ ಸಿನಿಮೀಯ ಶೈಲಿಯಲ್ಲಿ ಹೊಡೆದಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News