ಕೊರೋನ ಸೋಂಕಿತರು ಹತ್ತಿರ ಬಂದರೆ ಎಚ್ಚರಿಸುತ್ತೆ ಈ ಆ್ಯಪ್
ಮಂಗಳೂರು, ಎ.11: ಕೊರೋನ ಸೋಂಕು ಪಾಸಿಟಿವ್ ರೋಗಿಗಳು ಹತ್ತಿರ ಬಂದರೆ ಅಲರ್ಟ್ ಮಾಡುವ ಹೊಸ ಆ್ಯಪ್‌ವೊಂದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಿದ್ಧಪಡಿಸಿದೆ.
ಅಂದರೆ ‘ಆರೋಗ್ಯ ಸೇತು ಕೋವಿಡ್ 19’ ಎಂಬ ಈ ಆ್ಯಪ್‌ನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿದರೆ, ಕೊರೋನ ಸೋಂಕು ಪಾಸಿಟಿವ್ ರೋಗಿಗಳು ತಮ್ಮ ಬಳಿ ಬಂದ ತಕ್ಷಣ ಈ ಆ್ಯಪ್ ಅಲರ್ಟ್ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಿದೆ.
ಇದು ಕೊರೋನ ಸೋಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ಇಡುವ ಆ್ಯಪ್ ಆಗಿದೆ. ಇದನ್ನು ಐಒಎಸ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‌ನಲ್ಲಿ ಬಳಸಬಹುದಾಗಿದೆ. ಅಂದರೆ ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿದ ಬಳಿಕ ಬ್ಲೂಟೂತ್ ಮತ್ತು ಲೊಕೇಶನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಶನ್ ಎಂದಿರುವುದನ್ನು always ಎಂದು ಕೊಡಬೇಕು. ಹಾಗಾಗಿ ಈ ಆ್ಯಪನ್ನು ಸಾರ್ವಜನಿಕರು, ಸರಕಾರಿ ನೌಕರರು, ಸ್ವಯಂ ಸೇವಕರು, ಕಡ್ಡಾಯವಾಗಿ ಡೌನ್‌ಲೋಡ್ ಮಾಡಬೇಕಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ತಿಳಿಸಿದ್ದಾರೆ.