ಎಸ್ಸೆಸ್ಸೆಫ್ ಸೀಖೋ ಸುನ್ನ-2020: ಮೇ 18ರಂದು ಫಲಿತಾಂಶ ಪ್ರಕಟ

Update: 2020-05-17 06:52 GMT

ಬೆಂಗಳೂರು, ಮೇ 17: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ಅಧೀನದಲ್ಲಿ ರಾಜ್ಯಾದ್ಯಂತವಿರುವ ಕಾರ್ಯಕರ್ತರಿಗೆ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶಗಳನ್ನು ಕಲಿಯಲು ಪುಸ್ತಕಗಳನ್ನು ನೀಡಿ ಎಪ್ರಿಲ್ 28, 29 ಮತ್ತು 30ರಂದು ಅದರ ಪರೀಕ್ಷೆ ‘ಎಸ್ಸೆಸ್ಸೆಫ್ ಸೀಖೋ ಸುನ್ನ-2020’ ಆನ್ ಲೈನ್ ನಲ್ಲಿ ನಡೆಸಲಾಗಿತ್ತು. ಅದರ ಫಲಿತಾಂಶ ಮೇ 18ರಂದು ಪೂರ್ವಾಹ್ನ 11 ಗಂಟೆಗೆ  ssfkarnataka/alhasanmedia ಯೂಟೂಬ್ ಚಾನೆಲ್ ಗಳಲ್ಲಿ ಲೈವ್ ಆಗಿ ಮತ್ತು  ಎಸ್ಸೆಸ್ಸೆಫ್ ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗುವುದು ಎಂದು ಸೀಕೋ ಸುನ್ನ ಚೀಫ್ ಕೋ ಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News