ಬೆಂಗಳೂರು ಜಲಮಂಡಳಿಯಿಂದ ದತ್ತಾಂಶ ಸಮೀಕ್ಷೆ

Update: 2020-06-08 12:56 GMT

ಬೆಂಗಳೂರು, ಜೂ.8: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರು ನಗರದ ಸಮಸ್ತ ನಾಗರಿಕರಿಗೆ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯವನ್ನು ಸಮರ್ಥವಾಗಿ ಒದಗಿಸುತ್ತಾ ಬರುತ್ತಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ವಿಸ್ತೀರ್ಣ, ಮಹಡಿ, ಬೋರ್‌ವೆಲ್, ಒಳಚರಂಡಿ ಸಂಪರ್ಕ, ಮಳೆನೀರು ಕೊಯ್ಲು ಮೊದಲಾದವುಗಳ ಮಾಹಿತಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ದಾಖಲೆಯಾಗಿಸುವ ಸಮೀಕ್ಷೆಯನ್ನು ಪ್ರಾರಂಭಿಸಿದೆ.

ಈ ಸಮೀಕ್ಷೆಯಿಂದ ಬಿಬಿಎಂಪಿಯು ಪ್ರತಿ ಕಟ್ಟಡಗಳಿಗೆ ನೀಡಿರುವ ಪಿಐಡಿ ಸಂಖ್ಯೆಯನ್ನು ನೀರಿನ ಸಂಪರ್ಕದ ಸಂಖ್ಯೆಯೊಂದಿಗೆ ಸಂಪರ್ಕಿಸಲು ಸಹಾಯವಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಜಲಮಂಡಳಿಯ ದತ್ತಾಂಶದಲ್ಲಿ ಸೇರ್ಪಡೆಗೊಳಿಸಲು ಜಲಮಂಡಳಿಯು ತೀರ್ಮಾನಿಸಲಾಗಿದೆ. ಮಂಡಳಿಯ ಜಲಮಾಪನ ಓದುಗರು ನೀರಿನ ಬಿಲ್ ವಿತರಿಸುವ ಸಂದರ್ಭದಲ್ಲಿ ಈ ಸಮೀಕ್ಷೆಯ ಅರ್ಜಿಯನ್ನು ಮನೆ ಮಾಲಕರಿಗೆ ನೀಡುತ್ತಾರೆ, ಸದರಿ ಅರ್ಜಿಯಲ್ಲಿರುವ ಮಾಹಿತಿಗಳನ್ನು ಭರ್ತಿ ಮಾಡಿ ಸಾರ್ವಜನಿಕರು ಮುಂದಿನ ತಿಂಗಳು ಮಾಪನ ಓದುಗರಿಗೆ ನೀಡಬಹುದು ಅಥವಾ ಸಮೀಪದ ಉಪವಿಭಾಗದ ಕಚೇರಿಗಳಲ್ಲಿ/ ಸೇವಾಠಾಣೆಯಲ್ಲಿ ಸಲ್ಲಿಸಬಹುದಾಗಿರುತ್ತದೆ.

ಈ ಸಮೀಕ್ಷೆಗೆ ಸಾರ್ವಜನಿಕರು ಮಂಡಳಿಯ ಜಲಮಾಪನ ಓದುಗರೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ. ಸದರಿ ಸಮೀಕ್ಷೆಯ ಕುರಿತು ಹಾಗೂ ಅರ್ಜಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ಅಧಿಕೃತ ಜಾಲತಾಣ www.bwssb.gov.in ದಲ್ಲಿ ಪಡೆಯಬಹುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News