ಹೈಕೋರ್ಟ್, ಜಿಲ್ಲಾ ಕೋರ್ಟ್ ಗಳಲ್ಲಿ ಕಲಾಪ ಮಾರ್ಗಸೂಚಿ ಮಾರ್ಪಾಡು

Update: 2020-06-14 17:32 GMT

ಬೆಂಗಳೂರು, ಜೂ.14: ಕೊರೋನ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಗೂ ಜಿಲ್ಲಾ ಕೋರ್ಟ್ ಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ಜೂ.15ರಿಂದ ಜಾರಿಗೆ ಬರುವಂತೆ ಮಾರ್ಪಾಡು ಮಾಡಲಾಗಿದೆ.

ಜೂ.15ರಿಂದ 2 ವಾರಗಳ ಅವಧಿಗೆ ಮಾತ್ರ ಒಂದು ಕೋರ್ಟ್ ನಲ್ಲಿ ದಿನಕ್ಕೆ ಬೆಳಗಿನ ಅವಧಿಯಲ್ಲಿ 10 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು. ಹಾಗೊಂದು ಬಾರಿ ವಕೀಲರು ವಾದ ಮಂಡನೆಗೆ ಇಚ್ಛಿಸಿದರೆ ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲಾಗುವುದು.

ಕೋರ್ಟ್ ಆವರಣಕ್ಕೆ ವಾದ ಮಂಡಿಸಲಿರುವ ವಕೀಲರನ್ನು ಹೊರತುಪಡಿಸಿ, ಇತರರಿಗೆ ಪ್ರವೇಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಮುಂದಿನ 2 ವಾರಗಳ ಪರಿಸ್ಥಿತಿ ಅವಲೋಕಿಸಿ ಮಾರ್ಗಸೂಚಿ ಮಾರ್ಪಾಡು ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News