‘ಹಸಿರು ಕರಾವಳಿ’ ಪರಿಸರ ಜಾಗೃತಿ ಅಭಿಯಾನಕ್ಕೆ ಡಿಸಿ ಚಾಲನೆ

Update: 2020-06-18 16:54 GMT

ಮಂಗಳೂರು, ಜೂ.18: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾದ (ಎಸ್‌ಐಒ) ದ.ಕ. ಜಿಲ್ಲಾ ಘಟಕವು ಜೂ.20ರಿಂದ ಜು.20ರವರೆಗೆ ಹಸಿರು ಕರಾವಳಿ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಅಭಿಯಾನ ಆಯೋಜಿಸಿದ್ದು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪೋಸ್ಟರ್ ಬಿಡುಗಡೆಗೊಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಎಸ್‌ಐಒ ಜಿಲ್ಲಾಧ್ಯಕ್ಷ ಅಶೀರುದ್ದೀನ್ ಆಲಿಯಾ, ಕುದ್ರೋಳಿ ಘಟಕದ ಸದಸ್ಯರಾದ ಮುಹಮ್ಮದ್ ನಿಹಾಲ್, ರುಮಾನ್ ಮತ್ತಿತರರಿದ್ದರು.

ಹಸಿರು ಕರಾವಳಿ ಅಭಿಯಾನ: ದೇಶಾದ್ಯಂತ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ವಿದ್ಯಾರ್ಥಿಗಳೆಲ್ಲ ಮನೆಯಲ್ಲಿ ಇರುತ್ತಾರೆ. ಅಂಥವರಿಗಾಗಿ ಎಸ್‌ಐಒದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗಿಡ ವಿತರಣೆ, ಮಕ್ಕಳಿಗೆ ಪರಿಸರ ಜಾಗೃತಿ ಸ್ಪರ್ಧೆಗಳನ್ನು ಏರ್ಪಡಿಸುವುದು, ಹೂವು ಮತ್ತು ತರಕಾರಿ ತೋಟಗಳನ್ನು ನಿರ್ಮಿಸಲು ಪ್ರೋತ್ಸಾಹಿ ಸುವುದು ಮತ್ತು ಸಹಕರಿಸುವುದು ಸೇರಿದಂತೆ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ನಮ್ಮ ಜವಾಬ್ದಾರಿಯುತ ಹೊಣೆಗಾರಿಕೆಯಾಗಿದೆ ಎಂದು ಎನ್ನುತ್ತಾರೆ ಸಂಘಟಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News