ಸೋಮೇಶ್ವರ ಪುರಸಭೆಯಿಂದ ಮಾಸ್ಕ್ ದಿನ ಆಚರಣೆ

Update: 2020-06-18 17:02 GMT

ಉಳ್ಳಾಲ: ಸೋಮೇಶ್ವರ ಪುರಸಭೆ ಯಲ್ಲಿ ಕೋವಿಡ್-19 ನಿಯಂತ್ರಣದ ಪ್ರಯುಕ್ತ ಜನ ಜಾಗೃತಿ ಮೂಡಿಸುವ ಸಲುವಾಗಿ  ಮಾಸ್ಕ್ ದಿನ ಆಚರಿಸುವ ಮೂಲಕ ಸೋಮೇಶ್ವರ ಪುರಸಭೆಯಿಂದ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ನಡೆಸಿದರು.

ಕಾರ್ಯಕ್ರಮವನ್ನು ಸ್ಯಾನಿಟೈಝರ್ ಬಳಸುವ ಮೂಲಕ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ವಿ.ಆಳ್ವ   ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊರೋನ ಜಾಗ್ರತೆ ಗಾಗಿ ಮಾಸ್ಕ್ ಬಳಕೆ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ  ಸೋಮೇಶ್ವರ ಪುರಸಭೆ ಯ ಕೌನ್ಸಿಲರ್ ಗಳು, ಆಶಾ ಕಾರ್ಯಕರ್ತೆಯರು, ಪುರಸಭೆಯ ಸಿಬ್ಬಂದಿ ವರ್ಗ ದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News