ಕೃಷ್ಣಾಪುರ : ಉಚಿತ ಸೊಳ್ಳೆ ಪರದೆ ವಿತರಣೆ; ಡೆಂಗಿ, ಮಲೇರಿಯ ತಡೆಗಟ್ಟುವ ಮಾಹಿತಿ ಕಾರ್ಯಕ್ರಮ

Update: 2020-06-19 15:06 GMT

ಮಂಗಳೂರು, ಜೂ.19: ಮಂಗಳೂರು ಮಹಾನಗರ ಪಾಲಿಕೆಯ ಕೃಷ್ಣಾಪುರ 5ನೇ ವಾರ್ಡ್‌ನ ದ.ಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗಿ, ಮಲೇರಿಯ ತಡೆಗಟ್ಟುವ ಮಾಹಿತಿ ಕಾರ್ಯಾಗಾರ ಹಾಗೂ ಉಚಿತವಾಗಿ ಸೊಳ್ಳೆಪರದೆ ವಿತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಾರ್ಡ್‌ನ ಕಾರ್ಪೊರೇಟರ್ ಶಂಶಾದ್ ಅಬೂಬಕರ್, ಮಳೆಗಾಲದ ಸಂದರ್ಭ ಸಾಮಾನ್ಯ ಶೀತ, ಜ್ವರ, ಕೆಮ್ಮು ಬರುವುದು ಸಹಜ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಕೊರೋನ ಸೋಂಕು ತಗಲುವ ಸಾಧ್ಯತೆ ಇದೆ. ಎಲ್ಲರೂ ತಮ್ಮ ಕುಟುಂಬದ ಜವಾಬ್ದಾರಿ ಹೊರಬೇಕು. ಪ್ರತಿ ಮನೆಯಲ್ಲೂ ಆರೋಗ್ಯವಂತರು ಮತ್ತು ವಿದ್ಯಾವಂತರು ಇದ್ದರೆ ಖಂಡಿತ ನಮ್ಮದು ಮಾದರಿ ವಾರ್ಡ್ ಆಗಲಿದೆ. ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದಾಗ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಪ್ರವೀಣ್ ಅವರು ಡೆಂಗ್ ಮತ್ತು ಮಲೇರಿಯ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು. ಈ ಸಂದರ್ಭ ಎಸ್‌ಡಿಪಿಐ 5ನೇ ವಾರ್ಡ್ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಬೆಡ್ ಹೆಲ್ಪ್‌ಲೈನ್ ಅಧ್ಯಕ್ಷ ಇಫ್ತಿಕಾರ್, ಪಿಎಫ್‌ಐ ಸುರತ್ಕಲ್ ವಲಯ ಕಾರ್ಯದರ್ಶಿ ನೌಫಾಲ್ ಕೃಷ್ಣಾಪುರ, ಅಬೂಬಕರ್ ಕುಳಾಯಿ, ಎಂ.ಪಿ.ಡಬ್ಲೂ ಗಾಯತ್ರಿ ಹಾಗೂ ಎಲ್ಲ ವಾರ್ಡಿನ ಇನ್‌ಚಾರ್ಜ್‌ಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಜೀಬ್ ಸಾಕಿಬ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News