ಭಟ್ಕಳ: ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ. ಭಾಗೀರಥಿ ನಾಯ್ಕ

Update: 2020-06-20 13:48 GMT

ಭಟ್ಕಳ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ರಾಜ್ಯಶಾಸ್ತ್ರ ಉಪನ್ಯಾಸಕಿ ಡಾ. ಭಾಗೀರಥಿ ನಾಯ್ಕ ಅವರು ಅಧಿಕಾರ ಸ್ವೀಕರಿಸಿದರು. 

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಅಂಕೋಲಾದಿಂದ ನಿಯುಕ್ತಿಗೊಂಡಿದ್ದ ಡಾ. ದಸ್ತಗೀರ್ ಹಲ್ಯಾಳ್ ಅವರು ಪುನಃ ತಮ್ಮ ಮೂಲ ಸ್ಥಾನಕ್ಕೆ ವಾಪಾಸು ಹೋಗಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಪ್ರಭಾರ ಪ್ರಾಂಶುಪಾಲರಾಗಿ ಡಾ. ಭಾಗೀರಥಿ ನಾಯ್ಕ ಅವರು ಅಧಿಕಾರ ವಹಿಸಿಕೊಂಡರು.  ಈ ಹಿಂದೆ ಕೂಡಾ ಸುಮಾರು ಎರಡು ವರ್ಷಗಳ ಕಾಲ ಪ್ರಭಾರಿ ಪ್ರಾಂಶುಪಾಲೆಯಾಗಿ ಅನುಭವವನ್ನು ಹೊಂದಿರುವ ಡಾ. ಭಾಗೀರಥಿ ನಾಯ್ಕ ಅವರು ಮಾತನಾಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಉಪನ್ಯಾಸಕರನ್ನು ಹೊಂದಿದ್ದು ಕಾರಣಾಂತರಗಳಿಂದ ಈ ಹಿಂದೆ ದಾಖಲಾತಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಈ ಬಾರಿ ಉತ್ತಮ ದಾಖಲಾತಿಯೊಂದಿಗೆ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. 

ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿರ್ಗಮಿಸುತ್ತಿರುವ ಡಾ. ದಸ್ತಗೀರ್ ಹಲ್ಯಾಳ್ ಅವರನ್ನು ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಶಿವಾನಿ ಶಾಂತಾರಾಮ್, ಲೈಬ್ರರಿಯನ್ ನರಸಪ್ಪ ಕೆ.ಸಿ., ಸುಮಾ ನಾಯ್ಕ ಮುಂತಾದವರು ಉಪಸ್ಥತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News