ಜೂ. 23 : ಹದ್ದಾದ್ ಕಿತಾಬ್, ಅರೇಬಿಕ್ ನೋಟ್ ಬುಕ್ ಬಿಡುಗಡೆ

Update: 2020-06-22 17:00 GMT

ಮಂಗಳೂರು, ಜೂ. 22: ಅರೇಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕಗಳು ಮತ್ತು ಹದ್ದಾದ್ ಕಿತಾಬ್ ಬಿಡುಗಡೆ ಕಾರ್ಯಕ್ರಮ ಜೂ.23ರಂದು ಶಂಸುಲ್ ಉಲಮಾ ಪಬ್ಲಿಕೇಶನ್‌ನ ಎಂ.ಆರ್.ಬುಕ್‌ಸ್ಟಾಲ್ ಅಧೀನದ ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಲ್ಲಿರುವ ಪಿಯೊನೀರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಮದ್ರಸ ಪ್ರಾರಂಭೋತ್ಸವದ ಅಂಗವಾಗಿ ಪಿಯೊನೀರ್ ಕಾಂಪ್ಲೆಕ್ಸ್‌ನಲಿ ನಡೆಯುತ್ತಿರುವ ‘ಪುಸ್ತಕ ಮೇಳ-2020’ದಲ್ಲಿ ಈ ಹೊಸ ಪುಸ್ತಕಗಳನ್ನು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಅಧ್ಯಕ್ಷ ಅಮೀರ್ ತಂಙಳ್ ಕಿನ್ಯ ಅವರು ಮಾಜಿ ಸಚಿವ ಯು.ಟಿ.ಖಾದರ್‌ರಿಗೆ ನೀಡು ಮೂಲಕ ಬಿಡುಗಡೆ ಗೊಳಿಸಲಿದ್ದಾರೆ.

ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ಉದ್ಘಾಟಿಸುವರು. ಸಿತಾರ್ ಬೀಡಿ ಮಾಲಕ ಅಬ್ದುಲ್ ಮಜೀದ್ ಹಾಜಿ ಕಣ್ಣೂರು ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ.

ಜೂ.15ರವರೆಗೆ ನಡೆಯುವ ಈ ಪುಸ್ತಕ ಮೇಳದಲ್ಲಿ ಹಲವಾರು ಧಾರ್ಮಿಕ ಗ್ರಂಥಗಳು, ದೇಶ ವಿಧೇಶ ರಾಜ್ಯಗಳ ಕುರ್‌ಆನ್ ಗ್ರಂಥಗಳು, ಮದ್ರಸ ವಿದ್ಯಾರ್ಥಿಗಳ 1ರಿಂದ +2 ತರಗತಿ ವರೆಗಿನ ಪಠ್ಯ ಪುಸ್ತಕಗಳು, ಅರಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕಗಳು, ಶಾಲಾ-ಮದ್ರಸ ಪಠ್ಯೋಪಕರಣಗಳು ಲಭ್ಯವಿದೆ. ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 7ರ ತನಕ ಪುಸ್ತಕ ಮೇಳ ತೆರೆದಿರುತ್ತದೆ ಎಂದು ಮೇಳದ ವ್ಯವಸ್ಥಾಪಕರಾದ ಮುಸ್ತಫ ಫೈಝಿ ಕಿನ್ಯ ಹಾಗೂ ರಫೀಕ್ ಅಜ್ಜಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News