ಬಿ.ಎಸ್ಸಿ ವಿದ್ಯಾರ್ಥಿನಿ ನಾಪತ್ತೆ

Update: 2020-06-23 16:43 GMT

ಮಂಗಳೂರು, ಜೂ.23: ನಗರದ ಕಾರ್‌ಸ್ಟ್ರೀಟ್ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ನಂದಿನಿ (21) ಜೂ.21ರಂದು ನಾಪತ್ತೆಯಾಗಿದ್ದಾಳೆ.

ಹೊರ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ ನಂದಿನಿ ಹಿಂತಿರುಗಿ ಮನೆಗೆ ಬಂದಿಲ್ಲ. ಸ್ನೇಹಿತರ ಮನೆಯವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಈಕೆಯ ತಂದೆ ಪಾಂಡೇಶ್ವರ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

ಚಹರೆ: 5.3 ಅಡಿ ಎತ್ತರ, ಸಪೂರ ಶರೀರ, ದುಂಡು ಮುಖ, ಗೋದಿ ಮೈ ಬಣ್ಣ, ಕನ್ನಡ, ತುಳು, ಇಂಗ್ಲಿಷ್ ಮಾತನಾಡುತ್ತಾಳೆ. ಕಪ್ಪು ಪ್ಯಾಂಟ್, ಕೆಂಪು ಟಿ ಶರ್ಟ್ ಧರಿಸಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಿದವರು 0824-2220518 ಗೆ ತಿಳಿಸುವಂತೆ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News