ಕೊರೋನ ಸೋಂಕಿತರಿಗೆ ವಿಕ್ಟೋರಿಯಾದಲ್ಲಿ ಸಿಗುತ್ತಿಲ್ಲ ಮಾತ್ರೆ: ರೋಗಿಗಳ ಆರೋಪ

Update: 2020-06-23 18:40 GMT

ಬೆಂಗಳೂರು, ಜೂ. 23: ನಗರದಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಒಂದು ವಾರ ಆದರೂ ವೈದ್ಯಕೀಯ ಸಿಬ್ಬಂದಿ, ಸರಿಯಾಗಿ ಮಾತ್ರೆಗಳನ್ನ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ನಗರದಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಗಳ ಪೈಕಿ ವಿಕ್ಟೋರಿಯಾ ಆಸ್ಪತ್ರೆ ಸಹ ಒಂದು. ಆದರೆ ಇಲ್ಲಿನ ವೈದ್ಯಕೀಯ ಸಿಬ್ಬಂದಿ, ಆರೇಳು ದಿನಗಳಾದರೂ ನಮಗೆ ಮಾತ್ರೆಗಳನ್ನ ಕೊಟ್ಟಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.

ಅಲ್ಲದೇ, ಆಸ್ಪತ್ರೆಯಲ್ಲಿ ನಮಗೆ ನೀಡಲಾಗುತ್ತಿರುವ ಆಹಾರದಲ್ಲಿ ಯಾವುದೇ ಪೌಷ್ಠಿಕಾಂಶವೇ ಇಲ್ಲ. ರೊಟ್ಟಿ, ಅನ್ನ ಸರಿಯಾಗಿ ಬೇಯಲಿಲ್ಲ. ನಾವಿದನ್ನ ಹೇಗೆ ತಿನ್ನೋದು? ಅದರಿಂದ ನಮ್ಮನ್ನ ಮನೆಗೆ ಕಳಿಸಿಬಿಡಿ, ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತೇವೆ ಎಂದು ಕೊರೋನ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News