ಕೊರೋನ ಸೋಂಕಿತರು ಸಂಪರ್ಕ ಮುಚ್ಚಿಟ್ಟರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ

Update: 2020-06-24 06:54 GMT

ಉಡುಪಿ, ಜೂ.24: ಸ್ಥಳೀಯವಾಗಿ ಕೊರೋನ ಪಾಸಿಟಿವ್ ಬಂದಿರುವವರ ಟ್ರಾವೆಲ್ ಹಿಸ್ಟರಿಯನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರು ಪ್ರಾಥಮಿಕ, ಸೆಕೆಂಡರಿ ಸಂಪರ್ಕ ಬಗ್ಗೆ ಸ್ಪಷ್ಟವಾಗಿ ಹೇಳಿದರೆ, ಕೊರೋನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆದುದರಿಂದ ಯಾರು ಕೂಡ ಗೊತ್ತಿರುವ ವಿಚಾರವನ್ನು ಮುಚ್ಚಿಡಬಾರದು. ಆ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲ್ಯಾಬ್ ಟೆಕ್ನಿಶಿಯನ್ ಸಂರ್ಪಕ ಇಲ್ಲ ಎಂದು ಭಾವಿಸಿದ್ದೇವೆ. ಮುಂಬೈ ಯಿಂದ ಬಂದವರ ಜೊತೆ ಕಾರ್ಯಕ್ರಮ ನಡೆಸಿರುವುದು ಈಗ ಗೊತ್ತಾಗಿದೆ. ಅವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.

ಮಹಾರಾಷ್ಟ್ರದಿಂದ ಈಗಲೂ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಎಲ್ಲರನ್ನು ಕೂಡ ಹೋಮ್ ಕ್ವಾರಂಟೇನ್‌ನಲ್ಲಿ ಇರಿಸಲಾಗುತ್ತಿದೆ. ಇವರಲ್ಲಿ ಗರ್ಭಿಣಿ, ಸಣ್ಣ ಮಕ್ಕಳು ಹಾಗೂ 65ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಮನೆ ಭೇಟಿಯಲ್ಲಿ ಪ್ರಥಮ ಸ್ಥಾನ

ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೇನ್ ನಿರ್ವಹಣೆ ಅಸಾಧ್ಯವಾಗುವುದರಿಂದ ವಿಶೇಷವಾಗಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಿಂದ ಬಂದವರಿಗೆ ಹೋಮ್ ಕ್ವಾರಂಟೇನ್ ವಿಧಿಸಲು ಸರಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಆದುದರಿಂದ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳು ಶೇ.91ರಷ್ಟು ಹೋಮ್ ಕ್ವಾರಂಟೇನ್ ವಿಧಿಸಿರುವ ಮನೆಗಳಿಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಇದರಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೆ ಸ್ಥಾನವನ್ನು ಗುಲ್ಬರ್ಗ(ಶೇ.81) ಪಡೆದಿದೆ. ಹೋಮ್ ಕ್ವಾರಂಟೇನ್‌ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆ ಎಂಬುದನ್ನು ದೃಢ ಪಡಿಸಲು ಸೆಲ್ಫಿ ಫೋಟೋ ಕಳುಹಿಸುವುದರಲ್ಲಿ ಉಡುಪಿ ಜಿಲ್ಲೆ ಶೇ.48ರಷ್ಟು ಸಾಧನೆ ಮಾಡಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News