ಜು.1: ಕೃಷ್ಣಮಠದಲ್ಲಿ ಯತಿಗಳಿಗೆ ಮಾತ್ರ ತಪ್ತಮುದ್ರಾಧಾರಣೆ

Update: 2020-06-24 12:28 GMT

ಉಡುಪಿ, ಜೂ.24: ಚಾರ್ತುಮಾಸ ವೃತಾಚರಣೆಯ ಆರಂಭದ ಆಷಾಢ ಶುದ್ಧ ಏಕಾದಶಿಯಂದು ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ನಡೆಯುವುದು ಸಂಪ್ರದಾಯವಾಗಿದ್ದು, ಜುಲೈ 1ರ ಏಕಾದಶಿಯಂದು ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ  ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ

ಆದರೆ ಈ ಬಾರಿಯ ಕಾರ್ಯಕ್ರಮವು ಕೇವಲ ಯತಿವರ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ. ಮುಂದಿನ ಯಾವುದಾದರೂ ಶುಭ ದಿನದಂದು ಸಾರ್ವಜನಿಕರಿಗೆ ತಪ್ತಮುದ್ರಾಧಾರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪರ್ಯಾಯ ಅದಮಾರು ಪೀಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಅದೇ ರೀತಿ ಜೂ.30ರ ಮಂಗಳವಾರದಂದು ಶ್ರೀಕೃಷ್ಣ ಮಠದಲ್ಲಿ ಎಂದಿನಂತೆ ವಾರ್ಷಿಕ ಮಹಾಭಿಷೇಕ (ಸಿಯಾಳ ಅಭಿಷೇಕ) ನಡೆಯಲಿದೆ. ಆದರೆ ಕೋವಿಡ್-19ರ ಕಾರಣದಿಂದ ಶ್ರೀಮಠಕ್ಕೆ ಭಕ್ತರಿಗೆ ಪ್ರವೇಶವಿಲ್ಲವಾದ ಕಾರಣ, ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಸೀಯಾಳಗಳನ್ನು ನೀಡಲು ಬಯಸುವ ಭಕ್ತರು ಅದನ್ನು ರಾಜಾಂಗಣದ ಉತ್ತರ ದ್ವಾರದ ಬಳಿ ಜೂ.28ರ ಸಂಜೆಯೊ ಳಗೆ ನೀಡುವಂತೆ ಪರ್ಯಾಯ ಅಮಾರು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News