ಎಸೆಸೆಲ್ಸಿ ಪರೀಕ್ಷೆ : ದ.ಕ.ಜಿಲ್ಲೆಯಲ್ಲಿ 1,658 ವಿದ್ಯಾರ್ಥಿಗಳು ಗೈರು
Update: 2020-06-25 17:02 GMT
ಮಂಗಳೂರು, ಜೂ.25: ಎಸೆಸೆಲ್ಸಿ ಪರೀಕ್ಷೆ ಗುರುವಾರದಿಂದ ಆರಂಭವಾಗಿದ್ದು, ಮೊದಲ ದಿನ ದ್ವಿತೀಯ ಭಾಷೆ ಪರೀಕ್ಷೆಗೆ 1,658 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಇಂದಿನ ಪರೀಕ್ಷೆಗೆ 29,032 ವಿದ್ಯಾರ್ಥಿಗಳು ನೋಂದಣಿ ಆಗಿದ್ದು, ಒಟ್ಟು 27,374 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1,658 ವಿದ್ಯಾರ್ಥಿ ಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.