ಕೋವಿಡ್ ನಿಯಂತ್ರಣಕ್ಕೆ ಜಸ್ಟಿಸ್ ಫೋರಂ ಒತ್ತಾಯ

Update: 2020-06-25 17:19 GMT

ಮಂಗಳೂರು, ಜೂ. 25: ದೇಶಾದ್ಯಂತ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು, ಜನರು ಭೀತರಾಗಿದ್ದಾರೆ. ಈ ಆತಂಕವನ್ನು ದೂರ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮುಸ್ಲಿಮ್ ಜಸ್ಟಿಸ್ ಫೋರಮ್ (ಎಂಜೆಎಫ್) ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜನರಲ್ಲಿ ಧೈರ್ಯ ತುಂಬಿಸುವ ಜೊತೆಗೆ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಬೂತ್‌ಮಟ್ಟದಲ್ಲಿ ಜನರ ಆರೋಗ್ಯ ತಪಾಸಣಾ ಶಿಬಿರಗಳ ವ್ಯವಸ್ಥೆ ಮಾಡಬೇಕು. ಈ ಮೂಲಕ ಜಿಲ್ಲೆಯ ಪ್ರತಿಯೊಬ್ಬರನ್ನು ಪರಿಶೀಲಿಸಿ ಜಿಲ್ಲೆಯನ್ನು ಕೊರೋನ ಮುಕ್ತ ಮಾಡಬೇಕು ಎಂದು ಫೋರಮ್ ಸಲಹೆ ನೀಡಿದೆ.

ಕೊರೋನ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ಸಂಘಸಂಸ್ಥೆಗಳು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಇವೆ. ಈ ಕಾರ್ಯಾಚರಣೆಗೆ ಜಿಲ್ಲಾಡಳಿತದ ಸಮನ್ವಯತೆ ಅಗತ್ಯ. ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲು ಫೋರಮ್ ತೀರ್ಮಾನಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಮುಸ್ಲಿಮ್ ಜಸ್ಟಿಸ್ ಫೋರಂ ಕರ್ನಾಟಕದ ಅಧ್ಯಕ್ಷ ಡಾ.ಅಮೀರ್ ಅಹ್ಮದ್ ತುಂಬೆ, ಸ್ಥಾಪಕ ರಫೀಉದ್ದೀನ್ ಕುದ್ರೋಳಿ, ಸಂಘಟನಾ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಇದ್ದಿನ್ ಕುಂಞಿ, ಸದಸ್ಯರಾದ ಇಮ್ರಾನ್ ಎ.ಆರ್., ಸಲಾಂ ಉಚ್ಚಿಲ್, ಯೂಸುಫ್ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News